ಪಂಚತAತ್ರದ ವಿಹಾನ್ ಮತ್ತು ಕಿಸ್, ಭರಾಟೆಯ ಶ್ರೀಲೀಲಾ ಲೆಟ್ಸ್ ಬ್ರೇಕಪ್ ಎನ್ನುತ್ತಿದ್ದಾರೆ. ಅರೆ.. ಇರ್ಯಾವಾಗ ಲವ್ ಮಾಡಿದ್ರು.. ಈಗ ಬ್ರೇಕಪ್ ಆಗ್ತಿರೋದೇಕೆ ಎಂದೆಲ್ಲ ಪ್ರಶ್ನೆ ಕೇಳಬೇಡಿ. ಇದು ಇವರಿಬ್ಬರೂ ನಟಿಸುತ್ತಿರುವ ಹೊಸ ಚಿತ್ರದ ಹೆಸರು.
ಈ ಯುವಜೋಡಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಯುವ ನಿರ್ದೇಶಕ ಸ್ವರೂಪ್. ಲಕ್ನೋ ಟು ಬೆಂಗಳೂರು ಎಂಬ ಚಿತ್ರವನ್ನು ನಿರ್ದೇಶಿಸಿರುವ ಸ್ವರೂಪ್ಗೆ ಇದು 2ನೇ ಸಿನಿಮಾ. ಜಯಣ್ಣ-ಭೋಗೇಂದ್ರ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ, ಏಪ್ರಿಲ್ನಲ್ಲಿ ಶುರುವಾಗುವ ನಿರೀಕ್ಷೆ ಇದೆ. ವ್ಯಾಲೆಂಟೈನ್ಸ್ ಡೇಗೆ ಫಸ್ಟ್ ಲುಕ್ ಬಿಡುಗಡೆ ಮಾಡಲಿದ್ದಾರಂತೆ.