` ಮನ್ಸಿಂದ ಯಾರೂನೂ ಕೆಟ್ಟವ್ರಲ್ಲ - ಕಿಚ್ಚನಂತೆಯೇ ಹಾಡಿದ ಆದಿತಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vasuki vaibhavi leads the song
Vasuki Vaibhavi Image

ಮನ್ಸಿಂದ ಯಾರೂನೂ ಕೆಟ್ಟವ್ರಲ್ಲ.. ಒಂದ್ ಮಾತೂ ಬತ್ತದೆ.. ಒಂದ್ ಮಾತೂ ಹೋಯ್ತದೆ.. ಜೀವನದಲ್ಲಿ ಏನೇ ಬಂದರೂ ಸಮಾಧಾನದಿಂದ ಇರಬೇಕು. ಮನುಷ್ಯನ ಮನಸ್ಸು ಕೆಟ್ಟದ್ದಲ್ಲವೇ ಅಲ್ಲ ಎಂಬ ಅರ್ಥದ ಈ ಸಾಲುಗಳ ಸೃಷ್ಟಿಕರ್ತ ವಾಸುಕಿ ವೈಭವ್. ಈ ಹಾಡು ಹುಟ್ಟಿದ್ದು ಬಿಗ್ ಬಾಸ್ ಮನೆಯಲ್ಲಿ.

ವಾಸುಕಿ ಸೃಷ್ಟಿಸಿದ ಹಾಡಿಗೆ ಹೊಸದೊಂದು ಎತ್ತರ ಸಿಕ್ಕಿದ್ದು ಆ ಹಾಡನ್ನು ಸುದೀಪ್ ಹಾಡಿದಾಗ. ವಾಸುಕಿ ವೈಭವ್ ಹುಟ್ಟುಹಬ್ಬಕ್ಕೆ ಸುದೀಪ್ ಕೊಟ್ಟ ಉಡುಗೊರೆ ಅದಾಗಿತ್ತು. ಅದಾದ ಮೇಲೆ ಆ ಹಾಡು ವೈರಲ್ಲಾಗಿ ಹೋಯ್ತು.

ಈಗ ಆ ಹಾಡಿನ ಸ್ಫೂರ್ತಿಯಲ್ಲೇ ಆದಿತಿ ಪ್ರಭುದೇವ ಕೂಡಾ ಆ ಹಾಡು ಹಾಡಿದ್ದಾರೆ. ಹಾಡಿನ ಸಾಹಿತ್ಯ ಇಷ್ಟವಾಯ್ತು. ಮೊದಲ ಬಾರಿಗೆ ಹಾಡಿದ್ದೇನೆ. ಹಾಡು ಹಾಡೋಕೆ ಸುದೀಪ್ ಸರ್ ಸ್ಫೂರ್ತಿ. ಕೆಟ್ಟದಾಗಿದ್ದರೆ ಕ್ಷಮಿಸಿಬಿಡಿ ಎಂದಿದ್ದಾರೆ ಆದಿತಿ.

Matthe Udbhava Trailer Launch Gallery

Maya Bazaar Pressmeet Gallery