ದಬಾAಗ್ 3 ಚಿತ್ರದಲ್ಲಿ ಸಲ್ಮಾನ್ ಖಾನ್ ಚುಲ್ ಬುಲ್ ಪಾಂಡೆಯಾಗಿದ್ದರೆ, ಅವರಿಗೆ ಎದುರಾಗಿ ಬಲ್ಲಿ ಸಿಂಗ್ ಆಗಿ ನಟಿಸಿರುವುದು ಕಿಚ್ಚ ಸುದೀಪ್. ಪ್ರಭುದೇವ ನಿರ್ದೇಶನದಲ್ಲಿ ಸಿನಿಮಾ ಸಖತ್ತಾಗಿ ಬಂದಿದೆ. ಬಲ್ಲಿ ಸಿಂಗ್ ಪಾತ್ರದ ತಾಕತ್ತೂ ಹಾಗೆಯೇ ಇದೆ. ಈಗ ಆ ಪಾತ್ರದ ಹಿನ್ನೆಲೆ ವಿವರಿಸಿದ್ದಾರೆ ಸುದೀಪ್.
ಬಲ್ಲಿ ಸಿಂಗ್ ಪಾತ್ರದ ತೂಕ ಹೆಚ್ಚಿಸಿದ್ದು ಸ್ವತಃ ಸಲ್ಮಾನ್ ಖಾನ್. ಎಷ್ಟೋ ಬಾರಿ ನನ್ನ ಪಾತ್ರಕ್ಕೆ ಇದು ಸಾಕಾಗ್ತಾ ಇಲ್ಲ, ಇನ್ನೂ ಏನೋ ಬೇಕು.. ಇನ್ನಷ್ಟು ಡೈಲಾಗ್ಸ್ ಬೇಕು.. ಎನ್ನುತ್ತಾ ನನ್ನ ಪಾತ್ರವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದು ಸ್ವತಃ ಸಲ್ಮಾನ್ ಎಂದಿದ್ದಾರೆ ಸುದೀಪ್.
ಸಾಮಾನ್ಯವಾಗಿ ಹೀರೋಗಳು ತಮ್ಮ ಎದುರಿನ ಪಾತ್ರ ಶೈನ್ ಆಗುತ್ತಿದೆ ಎಂದರೆ ಕಸಿವಿಸಿಗೊಳ್ಳುತ್ತಾರೆ. ಆದರೆ, ಸಲ್ಮಾನ್ ಹಾಗಲ್ಲ ಎನ್ನುವ ಸುದೀಪ್, ಡಿಸೆಂಬರ್ 20ಕ್ಕೆ ಎದುರು ನೋಡುತ್ತಿದ್ದಾರೆ.