ಡಾ.ರಾಜ್ ಕುಟುಂಬದವರು ಅಪ್ಪಟ ದೈವಭಕ್ತರು. ಅದರಲ್ಲೂ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಾಗ್ಗೆ ಹೋಗುತ್ತಲೇ ಇರುತ್ತಾರೆ. ಆದರೆ, ಈ ಬಾರಿ ಗೀತಾ ಶಿವರಾಜ್ ಕುಮಾರ್ ಯಾವುದೊ ಹರಕೆ ತೀರಿಸಿದ್ದಾರೆ. ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದಾರೆ.
ಪತ್ನಿ ಸಮೇತರಾಗಿ ಶಿವರಾಜ್ ಕುಮಾರ್ ಕೂಡಾ ತಿರುಪತಿಯಲ್ಲಿದ್ದರು. ಜೀವದ ಗೆಳೆಯ ಗುರುದತ್, ನಟ ರಘುರಾಮ್ ಕೂಡಾ ಜೊತೆಯಲ್ಲಿದ್ದರು. ಆದರೆ, ಗೀತಾ ಯಾವ ಹರಕೆ ಹೊತ್ತುಕೊಂಡಿದ್ದರು ಎನ್ನುವುದು ಗೊತ್ತಾಗಿಲ್ಲ. ಅದು ನಮ್ಮ ಮನಸ್ಸಿನ, ಕುಟುಂಬದ ವೈಯಕ್ತಿಕ ವಿಷಯ. ಸುದ್ದಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದೆ ಕುಟುಂಬ. ಏನೇ ಇರಲಿ, ತಿಮ್ಮಪ್ಪನ ಆಶೀರ್ವಾದ ಕುಟುಂಬದ ಮೇಲೆ ಸದಾ ಇರಲಿ.