ಯಾವುದೇ ಚಿತ್ರದ ಜೀವಾಳವೇ ಕ್ಲೈಮಾಕ್ಸ್. ಅಂಥಾದ್ದರಲ್ಲಿ ಬಾಲಿವುಡ್ಡಿನ ಬಹುನಿರೀಕ್ಷಿತ ಚಿತ್ರ ದಬಾಂಗ್ 3 ಚಿತ್ರದ ಕ್ಲೈಮಾಕ್ಸ್ ಲೀಕ್ ಆಗಿದೆ. ವಿಶೇಷ ಅಂದ್ರೆ, ಈ ಕ್ಲೈಮಾಕ್ಸ್ ದೃಶ್ಯದ ತುಣುಕುಗಳನ್ನು ಲೀಕ್ ಮಾಡಿರುವುದು ಸ್ವತಃ ಸಲ್ಮಾನ್ ಖಾನ್.
ಕ್ಲ್ಯೈಮ್ಯಾಕ್ಸ್ ಸೀನ್‌ನಲ್ಲಿ ಸಿಕ್ಕಾಪಟ್ಟೆ ಆ್ಯಕ್ಷನ್ ಇದ್ದು, ಬಲಿ ಸಿಂಗ್ ಆಗಿ ಸುದೀಪ್ ನಟಿಸಿದ್ದಾರೆ. 23 ದಿನ ಶೂಟಿಂಗ್ ಆದ ಕ್ಲೈಮಾಕ್ಸ್ ಇದು. ಸಲ್ಮಾನ್ 500 ಜನರ ವಿರುದ್ಧ ಫೈಟ್ ಮಾಡ್ತಾರಂತೆ. 00 ಕಾರ್‌ಗಳು ಕ್ಲ್ಯೈಮ್ಯಾಕ್ಸ್ ಸೀನ್‌ನಲ್ಲಿವೆಯಂತೆ. ಬ್ಲಾಸ್ಟ್ ಆಗ್ತವಾ..?
ಅಲ್ಲೇ ಇರೋದು ಟ್ವಿಸ್ಟು. ಸಲ್ಮಾನ್ ಖಾನ್ ಅಣ್ಣ ಅರ್ಬಾಜ್ ಖಾನ್ ಚಿತ್ರದ ನಿರ್ಮಾಪಕ. ಅಷ್ಟು ಸುಲಭವಾಗಿ ಬಿಟ್ಟು ಬಿಡ್ತಾರಾ..? ಪ್ರಭುದೇವ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 20ಕ್ಕೆ ರಿಲೀಸ್ ಆಗ್ತಿದೆ. ಅಲ್ಲಿಯವರೆಗೂ ಚುಲ್ ಬುಲ್ ಪಾಂಡೆ ಇಂತಹ ಮಜಾ ಕೊಡ್ತಾನೇ ಇರ್ತಾರೆ. ಫುಲ್ ಮಜಾ ಸಿಗೋದೇನಿದ್ರೂ ಆವತ್ತೇ..