ಒಂದು.. ಮತ್ತೊಂದು.. ಮಗದೊಂದು.. ಆರಂಭದಲ್ಲೇ ಹೀಗೆ ಸತತ ಹಿಟ್ ಸಿಕ್ಕರೆ, ಅದು ಕೊಡೊ ಕಿಕ್ಕೇ ಬೇರೆ. ಆಪರೇಷನ್ ಅಲಮೇಲಮ್ಮ ಚಿತ್ರದಿಂದ ಬೆಳ್ಳಿತೆರೆಗೆ ಪರಿಚಿತರಾದ ರಿಷಿ, ಈಗ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ.
ಸಿಂಪಲ್ ಸುನಿ ನಿರ್ದೇಶನದ ಆಪರೇಷನ್ ಅಲಮೇಲಮ್ಮ ಮತ್ತು ಪುನೀತ್ ನಿರ್ಮಾಣದ ಕವಲುದಾರಿ. ಎರಡೂ ಹಿಟ್ ಚಿತ್ರಗಳು. ಈ ವಾರ ಸಾರ್ವಜನಿಕರಿಗೆ ಸುವರ್ಣಾವಕಾಶ ರಿಲೀಸ್ ಆಗುತ್ತಿದೆ. ಈ ಬಾರಿಯೂ ಅವರಿಗೆ ಹಿಟ್ ಪ್ರೊಡ್ಯೂಸರ್, ಕಥೆಗಾರರು ಸಿಕ್ಕಿದ್ದಾರೆ.
ಗುಳ್ಟು ಖ್ಯಾತಿಯ ಜನಾರ್ದನ್ ಚಿಕ್ಕಣ್ಣ ಬ್ಯಾನರಿಗೆ ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ಗುಳ್ಟುನಲ್ಲಿ ಸಾಫ್ಟ್ವೇರ್ ವಂಚಕರ ಕಥೆಯನ್ನು ಅಷ್ಟೇ ಸೀರಿಯಸ್ಸಾಗಿ ಹೇಳಿದ್ದವರು ಈಗ ಕಾಮಿಡಿ ಅಸ್ತ್ರ ಎತ್ತಿಕೊಂಡಿದ್ದಾರೆ. ಇದು 100% ವೊರಿಜಿಲನಲ್ ಕಥೆ ಎನ್ನುವುದು ನಿರ್ದೇಶಕ ಅನೂಪರ್ ಅವರ ಕಾನ್ಫಿಡೆನ್ಸು. ಚಿತ್ರ ನೋಡಿ ನೀವು ನಕ್ಕರೆ.. ನಿರ್ಮಾಪಕರೂ ನಗುತ್ತಾರೆ. ಗೆಟ್ ರೆಡಿ..