` ನಗುವವರಿಗೆ.. ನಗಿಸುವವರಿಗೆ ಸುವರ್ಣಾವಕಾಶ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sarvajanikarige suvaranavakasha specialty
Sarvajanikarige Suvarnavakasha Movie Image

ಸಾರ್ವಜನಿಕರಿಗೆ ಸುವರ್ಣಾವಕಾಶ, ಇದು ಆಪರೇಷನ್ ಅಲಮೇಲಮ್ಮ, ಕವಲುದಾರಿ ಖ್ಯಾತಿಯ ರಿಷಿ ಅಭಿನಯದ ಹೊಸ ಚಿತ್ರ. ಅನೂಪ್ ರಾಮಸ್ವಾಮಿ ನಿರ್ದೇಶನದ ಟ್ರೇಲರ್, ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರದ ಟ್ರೇಲರಿನಲ್ಲಿ ಸಣ್ಣ ಸಣ್ಣ ತುಂಟಾಟಗಳು ನೋಡುವವರಿಗೆ ಇಷ್ಟವಾಗುತ್ತಿವೆ.

ರಿಷಿ ಎದುರು ಧನ್ಯಾ ಬಾಲಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ. ದತ್ತಣ್ಣ, ರಂಗಾಯಣ ರಘು, ಪೋಷಕ ಪಾತ್ರದಲ್ಲಿದ್ದಾರೆ.

ಚಿತ್ರದಲ್ಲಿ ಫಿಟ್ಸ್ ಬರುವ ನಾಯಕಿ, ಪ್ರೀತಿ, ಪ್ರೇಮ, ಮಧ್ಯೆಯೆಲ್ಲೋ ಒಂದು ವಿಚಿತ್ರವಾದ ಸಸ್ಪೆನ್ಸು ಎಲ್ಲವೂ ಇರುವ ಟ್ರೇಲರ್ ಪ್ರೇಕ್ಷಕರಿಗೆ ಇಷ್ಟವಾಗಿದೆ.

 

Matthe Udbhava Trailer Launch Gallery

Maya Bazaar Pressmeet Gallery