ಕಿಚ್ಚ ಸುದೀಪ್ ದಬಾಂಗ್ 3ಯಲ್ಲಿ ವಿಲನ್. ಸಲ್ಮಾನ್ ಖಾನ್ ಎದುರು ಖಳನಯಕನಾಗಿ ಅಬ್ಬರಿಸುತ್ತಿದ್ದಾರೆ. ಕನ್ನಡದಲ್ಲಿ ಇಷ್ಟು ದೊಡ್ಡ ಸ್ಟಾರ್ ಆಗಿ, ಬೇರೆ ಭಾಷೆಯಲ್ಲಿ ವಿಲನ್ ಆಗೋದೇಕೆ.. ಎನ್ನುವುದು ಹಲವರ ಪ್ರಶ್ನೆ. ಆದರೆ, ಅವುಗಳಿಗೆಲ್ಲ ಸುದೀಪ್ ಕೊಡುವ ಉತ್ತರವೇ ಬೇರೆ. ಒಬ್ಬ ಕಲಾವಿದ ಎಲ್ಲ ರೀತಿಯ ಪಾತ್ರಗಳನ್ನೂ ಮಾಡಬೇಕು ಅನ್ನೋದು ಅವರ ಮೊದಲ ವಾದ. ಎರಡನೆಯದು ತಮ್ಮೊಂದಿಗೆ ಕನ್ನಡವೂ ಅಲ್ಲಿಗೆ ತಲುಪಲಿದೆ ಎನ್ನುವ ದೂರಗಾಮಿ ಆಲೋಚನೆ.
ಹಾಗೆ ನೋಡಿದರೆ ಸುದೀಪ್ ವಿಲನ್ ಅಥವಾ ನೆಗೆಟಿವ್ ಶೇಡ್ ಇರುವ ಪಾತ್ರ ಮಾಡಿರುವುದು ಇದೇ ಮೊದಲಲ್ಲ. ಸುದೀಪ್ ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲೇ ವಾಲಿ ಚಿತ್ರ ಮಾಡಿದ್ದರು. ತಮ್ಮನ ಪತ್ನಿಯನ್ನು ಮೋಹಿಸುವ ಅಣ್ಣನಾಗಿ ಎದೆ ಝಲ್ ಎನ್ನುವ ಅಭಿನಯ ನೀಡಿದ್ದರು.
ಇನ್ನು ಸುದೀಪ್ ವೃತ್ತಿ ಜೀವನದ ಮೌಂಟ್ ಎವರೆಸ್ಟ್ ಈಗದಲ್ಲಿಯೂ ಅಷ್ಟೆ. ಆ ಚಿತ್ರದಲ್ಲಿ ಹೀರೋಗಿಂತ ಹೆಚ್ಚು ವಿಜೃಂಭಿಸಿದ್ದವರು ಸುದೀಪ್.
ಹಿಂದಿಯಲ್ಲಿ ಸುದೀಪ್ ಕೇವಲ ವಿಲನ್ ಪಾತ್ರಗಳನ್ನಷ್ಟೇ ಮಾಡುತ್ತಿಲ್ಲ. ಬೇರೆ ರೀತಿಯ ಪಾಸಿಟಿವ್ ಪಾತ್ರಗಳನ್ನೂ ಆಯ್ಕೆ ಮಾಡಿಕೊಂಡಿದ್ದಾರೆ.
ಈಗ ಸುದೀಪ್ ವಿಲನ್ ಆಗಿ ನಟಿಸಿರುವ ದಬಾಂಗ್ 3 ಬಾಕ್ಸಿಂಗ್ ಡೇಯಂದು ರಿಲೀಸ್ ಆಗುತ್ತಿದೆ. ಪ್ರಭುದೇವ ನಿರ್ದೇಶನ, ಸಲ್ಮಾನ್-ಸೋನಾಕ್ಷಿ ಸಿನ್ಹಾ ಅಭಿನಯದ ಚಿತ್ರದಲ್ಲಿ ಸುದೀಪ್ ವಿಲನ್.