ಸೀರೇಲಿ ಬಳುಕುತ್ತಾ ಬಂದೆ.. ನೀನು ಬಿಚ್ಚೋಲೆ ಗೌರಮ್ಮನಂತೆ.. ನೀ ಏನೇ ಕೇಳು ಹೂ ಅನುವೆ..
ಇದು ದಬಾಂಗ್ ೩ ಚಿತ್ರದ ಯುಗಳ ಗೀತೆ. ಹಾಡಿಗೆ ಬಿಂದಾಸ್ ಆಗಿ ಕುಣಿದಿರೋದು ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹಾ. ಹಿಂದಿ ಹಾಡನ್ನು ಯಥಾವತ್ ಇಳಿಸದೆ, ಹೊಸದೇ ಎನ್ನುವ ರೀತಿಯಲ್ಲಿ ಸಾಹಿತ್ಯ ಬರೆದಿರುವುದು ರಂಗಿತರAಗದ ಅನೂಪ್ ಭಂಡಾರಿ.
ವಿಜಯ ಪ್ರಕಾಶ್ ಮತ್ತು ಐಶ್ವರ್ಯ ರಂಗರಾಜನ್ ಹಾಡು ಹಾಡಿದ್ದು, ಹಾಡು ಕಿಕ್ಕೇರಿಸಿದೆ. ಸಲ್ಮಾನ್ ಖಾನ್ ಜೊತೆಗೆ ಕಿಚ್ಚ ಸುದೀಪ್ ನೆಗೆಟಿವ್ ಶೇಡ್ ಪಾತ್ರದಲ್ಲಿ ನಟಿಸಿದ್ದು, ಕ್ರಿಸ್‌ಮಸ್‌ಗೆ ರಿಲೀಸ್ ಆಗುತ್ತಿದೆ. ಹೀಗಾಗಿಯೇ ದಬಾಂಗ್ ೩ ಸೆನ್ಸೇಷನ್ ಸೃಷ್ಟಿಸಿದೆ. ಇದರಂತೆಯೇ ಹಾಡು ಕೂಡಾ.