ಪ್ರೀತ್ಸೋದ್ ತಪ್ಪಾ.. ಪ್ರೀತ್ಸು ತಪ್ಪೇನಿಲ್ಲ.. ಎಂದು ಪ್ರೇಮಿಗಳಿಗೆಲ್ಲ ಪ್ರೇಮಲೋಕದ ಸಂದೇಶ ನೀಡಿದ ರವಿಚಂದ್ರನ್, ಕೊನೆಗೆ ಆಗಿದ್ದು ಅರೇಂಜ್ ಮ್ಯಾರೇಜು. ಸಿನಿಮಾ ಲವ್ವಲ್ಲಿ ಮುಳುಗಿ ಹೋಗಿದ್ದ ರವಿಗೆ ಲವ್ ಮಾಡೋಕೆ ಆಗಲಿಲ್ವಂತೆ ಅನ್ನೋದು ರೊಮ್ಯಾಂಟಿಕ್ ಮಿಸ್ಟರಿ. ಈಗ ಅವರ ಮಗನೂ ಅಪ್ಪನ ಹಾದಿಯಲ್ಲೇ ಸಾಗುತ್ತಿದ್ದಾರೆ.
‘ನನಗೆ ಲವ್ ಆಗಿಲ್ಲ, ಕಾಲೇಜಲ್ಲೂ ಆಗಿಲ್ಲ. ಇಂಡಸ್ಟ್ರಿಯಲ್ಲೂ ಆಗಿಲ್ಲ . ಪಕ್ಕಾ ಅರೇಂಜ್ ಮ್ಯಾರೇಜ್ ಆಗ್ತೀನಿ. ಇನ್ನು ಕೆಲವೇ ತಿಂಗಳಲ್ಲಿ ಮದುವೆ ಆಗುತ್ತೇನೆ. ಅಪ್ಪ, ಅಮ್ಮ ಹುಡುಗಿ ನೋಡುತ್ತಿದ್ದಾರೆ. ಮುಂದಿನ ವರ್ಷ ಮದುವೆಯಾದರೂ ಆಗಬಹುದು’ ಎಂದಿದ್ದಾರೆ ಮನುರಂಜನ್.
ಮುಗಿಲ್ ಪೇಟೆ ಚಿತ್ರದಲ್ಲಿ ಬ್ಯುಸಿಯಾಗಿರುವ ಮನುರಂಜನ್, ಮದುವೆಯ ಕುರಿತು ಬಿಚ್ಚಿಟ್ಟಿರುವುದು ಇದೊಂದೇ ಗುಟ್ಟು. ಮೊನ್ನೆ ಮೊನ್ನೆಯಷ್ಟೇ ತಂಗಿಯ ಮದುವೆ ಮಾಡಿ ಮುಗಿಸಿರುವ ಮನು, ಈಗ ಮದುಮಗನಾಲು ರೆಡಿ. ರವಿಚಂದ್ರನ್ ದಂಪತಿ ಈಗ ಸೊಸೆಯ ಹುಡುಕಾಟದಲ್ಲಿದ್ದಾರೆ.