` ಒನ್ಸ್ ಮೋರ್ ಕೌರವ : ಚಿತ್ರರಂಗಕ್ಕೆ ಗುಡ್ ನ್ಯೂಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bc patil's win brings food news to industry
BC Patil

15 ಕ್ಷೇತ್ರಗಳ ಬೈ ಎಲೆಕ್ಷನ್ ರಿಸಲ್ಟ್ ಹೊರಬಿದ್ದಿದೆ. ಇದರ ನಡುವೆ ಚಿತ್ರರಂಗಕ್ಕೆ ಒಂದು ಗುಡ್ ನ್ಯೂಸ್ ಇದೆ. ಏನೆಂದರೆ, ಅದು ಬಿ.ಸಿ.ಪಾಟೀಲ್ ಅವರದ್ದು. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಚಿತ್ರರಂಗದ ಒಡನಾಟ ಹೊಂದಿರುವ ಯಾರೊಬ್ಬರೂ ಸಚಿವರಾಗಿರಲಿಲ್ಲ. ಉಪಚುನಾವಣೆಗೂ ಮೊದಲು ಅನರ್ಹರಾಗಿದ್ದ ಬಿ.ಸಿ.ಪಾಟೀಲರಿಗೆ ಮಂತ್ರಿ ಸ್ಥಾನ ಕೊಡುತ್ತೇವೆ ಎಂದು ವಚನ ಕೊಟ್ಟಿದ್ದರು ಬಿ.ಎಸ್.ಯಡಿಯೂರಪ್ಪ.

ಈಗ ರಿಸಲ್ಟು ಬಂದಿದ್ದು, ಬಿ.ಸಿ.ಪಾಟೀಲರು ಗೆದ್ದಾಗಿದೆ. ನಿರೀಕ್ಷೆಯಂತೆ ಬಿ.ಸಿ.ಪಾಟೀಲರು ಸಚಿವರಾಗಲಿದ್ದಾರೆ. ಯಾವ ಖಾತೆ ಅನ್ನೋದು ಯಡಿಯೂರಪ್ಪನವರಿಗೆ ಮಾತ್ರವೇ ಗೊತ್ತು. ಬಿ.ಸಿ.ಪಾಟೀಲರಿಂದ ಚಿತ್ರರಂಗಕ್ಕೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಚಿತ್ರೋದ್ಯಮದಲ್ಲಿದೆ. ಏಕೆಂದರೆ, ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಚಿತ್ರರಂಗದ ಎಲ್ಲ ಸಮಸ್ಯೆಗಳನ್ನೂ ಅರಿತುಕೊಂಡಿರುವ ಬಿ.ಸಿ.ಪಾಟೀಲ್, ಸಚಿವರಾದರೆ ಸರ್ಕಾರದಿಂದ ಉತ್ತಮ ಸಹಕಾರ ಸಿಗುವ ನಿರೀಕ್ಷೆಗಳಿದ್ದೇ ಇರುತ್ತವೆ.

Matthe Udbhava Trailer Launch Gallery

Maya Bazaar Pressmeet Gallery