` ರಂಗ ಶಂಕರದಲ್ಲಿ ಅಮೀರ್ ಖಾನ್ ಮಗ, ಮಗಳ ನಾಟಕ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
amir khan's daughter to perform at ranga shankara
Amir Khan, Ira Khan

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್, ನಟನಾಗಿ, ನಿರ್ಮಾಪಕನಾಗಿ ಮಿಸ್ಟರ್ ಪರ್ಫೆಕ್ಟ್ ಎಂದೇ ಹೆಸರು ಮಾಡಿದವರು. ಈಗ ಅವರ ಪುತ್ರಿ ಇರಾ ನಿರ್ದೇಶನಕ್ಕಿಳಿದಿದ್ದಾರೆ. ಅದು ರಂಗ ಶಂಕರದಲ್ಲಿ ಎನ್ನುವುದು ವಿಶೇಷ. ಈಗ ಅದು ಕರ್ನಾಟಕದ ಹೆಮ್ಮೆಯಾಗಿದೆ.

ಶಂಕರ್ ನಾಗ್ ಕನಸಿನ ಕೂಸಿಗೆ ಜೀವ ಎರೆದವರು ಅರುಂಧತಿ ನಾಗ್. ಅವರ ರಂಗ ಶಂಕರದಲ್ಲಿ ಅಮೀರ್ ಖಾನ್ ಪುತ್ರಿ ಇರಾ ನಿರ್ದೇಶನದ ಮೆಡಿಯಾ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ಇದು ಗ್ರೀಕ್ನ ನಾಟಕವೊಂದರ ಅವತರಣಿಕೆ. ಇಂಗ್ಲಿಷ್ ನಾಟಕ.

ಈ ನಾಟಕದಲ್ಲಿ ಅಮೀರ್ ಪುತ್ರಿ ಇರಾ ನಿರ್ದೇಶನ ಮಾಡಿದ್ದರೆ, ಮಗ ಜುನೈದ್ ಖಾನ್ ನಟಿಸಿದ್ದಾರೆ. ಮಕ್ಕಳ ಸಾಧನೆಗೆ ಶುಭ ಹಾರೈಸಿದ್ದಾರೆ ಅಮೀರ್ ಖಾನ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery