45 ಸಿನಿಮಾಗಳ ನಡುವೆ ರಿಲೀಸ್ ಆಗಿಯೂ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಸೆಳೆದು ಗೆದ್ದ ಸಿನಿಮಾ ಮುಂದಿನ ನಿಲ್ದಾಣ. ರಿಲೀಸ್ ಆದ ಮೇಲೆ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿತು, ಶೋಗಳ ಸಂಖ್ಯೆ ಹೆಚ್ಚಿತು ಎನ್ನುವುದರಲ್ಲೇ ಸಿನಿಮಾದ ಸಕ್ಸಸ್ಸಿದೆ. ಈಗ ಮುಂದಿನ ನಿಲ್ದಾಣ ಸಿಂಗಾಪುರಕ್ಕೆ ಹೊರಟಿದೆ.
ಇದೇ ವಾರದಿಂದ ಸಿಂಗಾಪುರದಲ್ಲಿ 25ಕ್ಕೂ ಸೆಂಟರುಗಳಲ್ಲಿ ಮುಂದಿನ ನಿಲ್ದಾಣ ರಿಲೀಸ್ ಆಗುತ್ತಿದೆ. ಸಿಂಗಾಪುರದಲ್ಲಿ 25+ ಕೇಂದ್ರ ಹೇಗೆ..? ಅದೂ ಕನ್ನಡ ಚಿತ್ರಕ್ಕೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿದ್ದರೆ, ಉತ್ತರ ಇರೋದು ನಿರ್ಮಾಪಕ ಮುರಳೀಧರ್ ಮತ್ತು ನಿರ್ದೇಶಕ ವಿನಯ್ ಭಾರದ್ವಾಜ್ ಅವರಲ್ಲಿ. ಅವರಿಗೆ ಅಲ್ಲಿ ದೊಡ್ಡ ನೆಟ್‌ವರ್ಕ್ ಇದೆ.
ರಾಧಿಕಾ ನಾರಾಯಣ್ ಹೆಸರು ಬದಲಿಸಿಕೊಂಡ ಮೇಲೆ ರಿಲೀಸ್ ಆಗಿದ್ದ ಮೊದಲ ಸಿನಿಮಾ ಮುಂದಿನ ನಿಲ್ದಾಣ. ಇನ್ನು ಪ್ರವೀಣ್ ತೇಜ್‌ಗೆ ಚೂರಿಕಟ್ಟೆಯಲ್ಲಿ ಹೆಸರು ಬಂದಿತ್ತು. ಈಗ ಯಶಸ್ಸೂ ಸಿಕ್ಕಿದೆ. ಅನನ್ಯ ಕಶ್ಯಪ್ ಪಾತ್ರ ಪ್ರೇಕ್ಷಕರ ಗಮನ ಸೆಳೆದಿದೆ. ಚಿತ್ರತಂಡದ ಸಂಭ್ರಮದ ನಡುವೆಯೇ ಸಿಂಗಾಪುರದಲ್ಲಿ ರಿಲೀಸ್ ಆಗ್ತಿದೆ ಚಿತ್ರ. ಅಷ್ಟೇ ಅಲ್ಲ, ಜಪಾನ್, ಚೀನಾದಲ್ಲೂ ಸಿನಿಮಾ ರಿಲೀಸ್ ಮಾಡ್ತಿದೆ ಮುಂದಿನ ನಿಲ್ದಾಣ ಟೀಂ.