Print 
umashri,

User Rating: 0 / 5

Star inactiveStar inactiveStar inactiveStar inactiveStar inactive
 
umashri makes a come back as puttamalli
Umashri

ಪುಟ್ನಂಜ ಚಿತ್ರದ ಪುಟ್ಮಲ್ಲಿ ಕ್ಯಾರೆಕ್ಟರ್, ಉಮಾಶ್ರೀ ವೃತ್ತಿ ಜೀವನದ ಅತಿದೊಡ್ಡ ಟರ್ನಿಂಗ್ ಪಾಯಿಂಟ್. ಅದುವರೆಗೆ ಡಬಲ್ ಮೀನಿಂಗ್ ಕಾಮಿಡಿಯಲ್ಲಿ ಕಳೆದುಹೋಗಿದ್ದ ಉಮಾಶ್ರೀಯೊಳಗಿನ ಕಲಾವಿದೆಯನ್ನು ಚಿತ್ರರಂಗ, ಪ್ರೇಕ್ಷಕರ ಎದುರು ಅದ್ಭುತವಾಗಿ ತೆರೆದಿಟ್ಟಿದ್ದರು ಕ್ರೇಜಿಸ್ಟಾರ್ ರವಿಚಂದ್ರನ್. ಅಲ್ಲಿಂದ ಉಮಾಶ್ರೀ ಸಿನಿ ಜರ್ನಿಯೇ ಬದಲಾಗಿದ್ದು ಸುಳ್ಳಲ್ಲ.

ಇನ್ನು ಸಿದ್ದರಾಮಯ್ಯ ಕ್ಯಾಬಿನೆಟ್ಟಿನಲ್ಲಿ ಸಚಿವೆಯಾಗಿ 5 ವರ್ಷ ಕೆಲಸ ಮಾಡಿದ ಉಮಾಶ್ರೀ, 2018ರಲ್ಲಿ ಎಲೆಕ್ಷನ್ ಸೋತರು. ಈಗ ಮತ್ತೊಮ್ಮೆ ಬಣ್ಣ ಹಚ್ಚುತ್ತಿದ್ದಾರೆ. ಬೆಳ್ಳಿತೆರೆಯಲ್ಲಿ ಅಲ್ಲ, ಕಿರುತೆರೆಯಲ್ಲಿ.

ಸ್ಟಾರ್ ಸುವರ್ಣ ವಾಹಿನಿಯ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ಪುಟ್ಮಲ್ಲಿ ಪಾತ್ರ ಮಾಡುತ್ತಿದ್ದಾರೆ ಉಮಾಶ್ರೀ. ಈ ಹಿಂದೆ ಕಿರುತೆರೆಯಲ್ಲಿ ಅಮ್ಮ ನಿನಗಾಗಿ, ಕಿಚ್ಚು, ಮುಸ್ಸಂಜೆ ಧಾರಾವಾಹಿಗಳಲ್ಲಿ ನಟಿಸಿದ್ದ ಉಮಾಶ್ರೀಗೆ ಕಿರುತೆರೆಯೂ ಹೊಸದೇನಲ್ಲ.