ಕೆಜಿಎಫ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿರುವ ರಾಕಿಂಗ್ ಸ್ಟಾರ್ ಯಶ್, ಈಗ ಮತ್ತೊಂದು ದಾಖಲೆ ಬರೆದಿದ್ದಾರೆ. ಇದು ಚಿತ್ರಮಂದಿರ ಅಥವಾ ಕಿರುತೆರೆಯಲ್ಲಿ ಅಲ್ಲ. ಅಮೇಜಾನ್ ಪ್ರೆöÊಂನಲ್ಲಿ.
ಈ ವರ್ಷ ಅಮೇಜಾನ್ ಪ್ರೆöÊಂನಲ್ಲಿ ಅತೀ ಹೆಚ್ಚು ಜನರು ವೀಕ್ಷಿಸಿರುವ ಸಿನಿಮಾ ಕೆಜಿಎಫ್. ಹೌದು, ಎಲ್ಲ ಭಾಷೆಯ ಚಿತ್ರಗಳನ್ನೂ ರಿಲೀಸ್ ಮಾಡುವ ಅಮೇಜಾನ್ ಪ್ರೆöÊಂನಲ್ಲಿ ಈ ವರ್ಷದ ಸೂಪರ್ ಹಿಟ್ ನಂ.1 ಸಿನಿಮಾ ಕೆಜಿಎಫ್. ಎಲ್ಲ ಭಾಷೆಗಳನ್ನೂ ಹಿಂದಿಕ್ಕಿ ಕನ್ನಡದ ಕೆಜಿಎಫ್ ದಾಖಲೆ ಸೃಷ್ಟಿಸಿದೆ.
ಪ್ರಶಾಂತ್ ನೀಲ್ ನಿರ್ದೇಶನದ, ವಿಜಯ್ ಕಿರಗಂದೂರು ನಿರ್ಮಿಸಿದ್ದ ಕೆಜಿಎಫ್, ಬಾಕ್ಸಾಫೀಸಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. ಈಗ ಡಿಜಿಟಲ್ ಸ್ಟೇಜ್‌ನಲ್ಲೂ ದಾಖಲೆ ಬರೆದಿದೆ. ಸಿನಿಮಾ ರಿಲೀಸ್ ಆದ 50 ದಿನಗಳ ನಂತರ ಅಮೇಜಾನ್ ಪ್ರೆöÊಂನಲ್ಲಿ ರಿಲೀಸ್ ಆಗಿತ್ತು ಕೆಜಿಎಫ್.