ಹಿಡ್ಕ ಹಿಡ್ಕ ಹಿಡ್ಕ ಹಿಡ್ಕ.. ಎನ್ನುತ್ತ ಹಾಡಿನ ಹವಾ ಸೃಷ್ಟಿಸಿದ್ದ ಬ್ರಹ್ಮಚಾರಿ ಗೆದ್ದೇ ಬಿಟ್ಟಿದ್ದಾನೆ. ಸಿನಿಮಾ ರಿಲೀಸ್ ಮಾಡಿದ್ದು 200 ಸೆಂಟರುಗಳಲ್ಲಿ. 2ನೇ ವಾರ ಪೂರೈಸುತ್ತಿರುವ ಬ್ರಹ್ಮಚಾರಿ, ಈಗ 225 ಸೆಂಟರುಗಳಲ್ಲಿ ನಕ್ಕು ನಲಿಸುತ್ತಿದ್ದಾರೆ. ಸಿನಿಮಾ ಗೆದ್ದಿದೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲವೇನೊ..
ನೀನಾಸಂ ಸತೀಶ್, ಆದಿತಿ ಪ್ರಭುದೇವ ಅಭಿನಯದ ಬ್ರಹ್ಮಚಾರಿ 45 ಸಿನಿಮಾಗಳ ಜೊತೆ ರಿಲೀಸ್ ಆಗಿದ್ದ ಸಿನಿಮಾ. ಅಷ್ಟು ದೊಡ್ಡ ರೇಸ್‌ನಲ್ಲಿ ಗೆದ್ದ ಸಿನಿಮಾ. ಉದಯ್ ಕುಮಾರ್ ಮೆಹ್ತಾ-ಸತೀಶ್ ಕಾಂಬಿನೇಷನ್ ಮತ್ತೊಮ್ಮೆ ವರ್ಕೌಟ್ ಆಗಿದೆ. ಚಂದ್ರಮೋಹನ್ ತುಂಟಾಟ ಆಡಿಸಿ ಮತ್ತೊಮ್ಮೆ ಹಿಟ್ ಹಿಡ್ಕೊಂಡಿದ್ದಾರೆ.