ರಾಕಿಂಗ್ ಸ್ಟಾರ್, ರಾಕಿಭಾಯ್, ರಾಜಾಹುಲಿ, ಮಾಸ್ಟರ್ ಪೀಸ್, ಕಿರಾತಕ ಎಂದೆಲ್ಲ ಕರೆಸಿಕೊಳ್ಳುವ ಯಶ್, ಈಗ ಕನ್ನಡ ಕಲಾಭೂಷಣರಾಗಿದ್ದಾರೆ.
ಯಶ್ ಅವರಿಗೆ ಈ ಬಿರುದು ನೀಡಿರುವುದು ಬೆಂಗಳೂರಿನ ಗೆಲುವು ಕನ್ನಡ ಗೆಳೆಯರ ಸಮಿತಿ ಮತ್ತು ಬಿಕೆಜಿಎಸ್ ಚಾರಿಟಬಲ್ ಟ್ರಸ್ಟ್. ಕರುನಾಡ ಸಂಭ್ರಮ ಕಾರ್ಯಕ್ರಮದಲ್ಲಿ ಯಶ್‌ಗೆ `ಕನ್ನಡ ಕಲಾಭೂಷಣ' ಎಂದು ಬಿರುದು ನೀಡಿ ಸನ್ಮಾನಿಸಿದ್ದಾರೆ ಸಂಘಟನೆ ಕಾರ್ಯಕರ್ತರು.