ಸಲ್ಮಾನ್ ಖಾನ್, ಬಾಲಿವುಡ್ ಸುಲ್ತಾನ್. ಜಗತ್ತಿನಾದ್ಯಂತ ಕೋಟಿ ಕೋಟಿ ಅಭಿಮಾನಿಗಳಿರೋ ಸಲ್ಮಾನ್, ಇದೇ ಮೊದಲ ಬಾರಿಗೆಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಲರ್ಸ್ ವಾಹಿನಿಯ ಸೆನ್ಸೇಷನ್ ಬಿಗ್ ಬಾಸ್ ಶೋನಲ್ಲಿ ವಾರದ ಕಥೆ ಕಿಚ್ಚನಜೊತೆಯಲ್ಲಿ ಸಲ್ಮಾನ್ ಖಾನ್ ಈ ವಾರದ ಅತಿಥಿಯಾಗಿದ್ದರು.
ಹಿಂದಿ ಬಿಗ್ ಬಾಸ್ ನಲ್ಲಿ ಬಳಸುವ ಕೆಲ ಪದಗಳನ್ನ ಕನ್ನಡದಲ್ಲಿ ಹೇಗೆ ಹೇಳುವಿರಿ ಎಂದು ಸುದೀಪ್ ಅವರಿಂದ ಕೇಳಿ ಅದನ್ನ ಪುನರ್ಉಚ್ಚರಿಸಿದರು ಮತ್ತು ಕನ್ನಡ ಇಷ್ಟು ಸುಲಭವಾಗಿ ಹೇಳಬಹುದು ಎಂದಾದರೆ ನಾನೇ ನಡೆಸಿಕೊಡುವೆ ಎಂದಾಗ ಸುದೀಪ್ ಕೂಡಲೆಸಂತೋಷದಿಂದ ಒಪ್ಪಿ ಆಹ್ವಾನಿಸಿದರು.
ಹಿಂದಿ ಬಿಗ್ ಬಾಸ್ ಶೋ ನಿರೂಪಕರೂ ಆಗಿರುವ ಸಲ್ಮಾನ್ ಖಾನ್ ಅವರ ದಬಾಂಗ್ 3 ಈ ಬಾರಿ ಕನ್ನಡದಲ್ಲಿ ಡಬ್ ಆಗಿ ಬರುತ್ತಿದೆ. ಇದೇ ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡಾ ನಟಿಸಿದ್ದಾರೆ. ದಬಾಂಗ್ 3 ಚಿತ್ರದ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಬಂದಿರುವ ಸಲ್ಮಾನ್, ಕನ್ನಡದಕಿರುತೆರೆಯ ಟಾಪ್ ಶೋ ಬಿಗ್ಬಾಸ್ನಲ್ಲಿ ಕಾಣಿಸಿಕೊಂಡಿದ್ದಾರೆ.