ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಫಿಟ್ನೆಸ್ ವಿಡಿಯೋ ವೈರಲ್ ಟ್ರೆಂಡ್ ಆಗಿದೆ. ಕ್ರಾಸ್ ಫಿಟ್ನೆಸ್ ಮತ್ತು ರೋಪ್ ಫಿಟ್ನೆಸ್ ವಿಡಿಯೋಗಳನ್ನು ನೋಡಿದವರು ವ್ಹಾವ್ ಎನ್ನುತ್ತಿದ್ದಾರೆ. ಇಷ್ಟಕ್ಕೂ 40+ನಲ್ಲಿ ಈ ಫಿಟ್ನೆಸ್ ಕಾಯ್ದುಕೊಂಡಿರುವ ಪುನೀತ್ ಏನು ಮಾಡ್ತಾರೆ..?
ಇನ್ನೇನಿಲ್ಲ, ಪ್ರತಿದಿನ 10 ಕಿ.ಮೀ. ರನ್ನಿಂಗ್ ಮಾಡ್ತಾರೆ. ಓಡುವುದು ತಪ್ಪಿಸಲ್ಲ. ಜೊತೆಗೆ ಸಮಯ ಸಿಕ್ಕಾಗ ಮಾರ್ಷಲ್ ಆರ್ಟ್ಸ್ ಪ್ರಾಕ್ಟೀಸ್ ಮಾಡ್ತಾರೆ. ಶೂಟಿಂಗ್ ಇರಲಿ, ಬಿಡಲಿ.. ಪ್ರತಿದಿನ 1 ಗಂಟೆ ವರ್ಕೌಟ್ ಪಕ್ಕಾ. ಸಂಜೆ ಹೊತ್ತು ಫ್ರೀ ಇದ್ದಾಗ ವಾಕಿಂಗ್ ಮಾಡ್ತಾರೆ. ಮನೆಯಲ್ಲೇ ಇರೋ ಜಿಮ್ನಲ್ಲಿ ಕ್ರಾಸ್ ಫಿಟ್ನೆಸ್ ವ್ಯಾಯಾಮ ಮಾಡಿದ್ರೆ, ಬೇರೆ ವರ್ಕೌಟ್ಗಳಿಗೆ ಜಿಮ್ಗೆ ಹೋಗ್ತಾರೆ. ಜೊತೆಗೆ ಆಗಾಗ್ಗೆ ಸೈಕ್ಲಿಂಗ್ ಮಾಡ್ತಾರೆ.