ಅವನೇ ಶ್ರೀಮನ್ನಾರಾಯಣ ಟ್ರೇಲರ್ ಕೇವಲ ಬರೀ ಯೂಟ್ಯೂಬ್ ಹಿಟ್ಸ್ ಗಿಟ್ಟಿಸಿಲ್ಲ. ಅಭಿಮಾನಿಗಳ ಹೃದಯ ತಣಿಸಿಲ್ಲ. ಅದೆಲ್ಲವನ್ನೂ ಮೀರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ ಅವನೇ ಶ್ರೀಮನ್ನಾರಾಯಣ.
ಎಎಸ್ಎನ್ ಟ್ರೇಲರ್ನಲ್ಲಿ ರಕ್ಷಿತ್ ಶೆಟ್ಟಿ ಡೈಲಾಗ್, ನೆರಳು ಬೆಳಕಿನ ಆಟದ ಜೊತೆಗೆ ಇಡೀ ಟ್ರೇಲರ್ನ ಬಿಜಿಎಂ ಅರ್ಥಾತ್ ಹಿನ್ನೆಲೆ ಸಂಗೀತ ಮೆಚ್ಚುಗೆ ಪಡೆದಿದೆ. ಅಜನೀಶ್ ಲೋಕನಾಥ್ ಮತ್ತೊಮ್ಮೆ ತಮ್ಮ ಖದರು ತೋರಿಸಿದ್ದಾರೆ. ಎಡಿಟಿಂಗ್ ಕ್ಲಾಸ್ ಎನ್ನುತ್ತಿದ್ದಾರೆ ವಿಮರ್ಶಕರು. ಹಾಹಾಹಾ.. ಚಿತ್ರದ ಟ್ರೇಲರ್ಗೆ ಇಷ್ಟೆಲ್ಲ ಮೆಚ್ಚುಗೆ ಕೊಡುತ್ತಿರುವುದು ಗ್ಲೋಬಲ್ ವಿಮರ್ಶಕರು.
ಯೂಟ್ಯೂಬ್ನಲ್ಲಿ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿಯಾದ ಕಾರಣ, ಸಹಜವಾಗಿಯೇ ಎಎಸ್ಎನ್ ಟ್ರೇಲರ್ ಗ್ಲೋಬಲ್ ವಿಮರ್ಶಕರ ಕಣ್ಣಿಗೆ ಬಿದ್ದಿದೆ. ಈ ವಿದೇಶಿ ಚಿತ್ರಗಳ ವಿಮರ್ಶಕರು ಅವನೇ ಶ್ರೀಮನ್ನಾರಾಯಣನ ಅವತಾರವನ್ನು ನೋಡಿ ಮೆಚ್ಚಿದ್ದಾರೆ. ಚಿತ್ರದ ಛಾಯಾಗ್ರಹಣ, ಮ್ಯೂಸಿಕ್, ಎಡಿಟಿಂಗ್.. ಎಲ್ಲದರ ಬಗ್ಗೆಯೂ ವಿಮರ್ಶೆ ಮಾಡಿದ್ದಾರೆ. ಎಎಸ್ಎನ್ಗೆ ಸಿಗುತ್ತಿರುವ ಈ ಪ್ರತಿಕ್ರಿಯೆ ನೋಡಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಹಜವಾಗಿಯೇ ಖುಷಿಯಾಗಿದ್ದಾರೆ.