ಚಾಲೆಂಜಿAಗ್ ಸ್ಟಾರ್ ದರ್ಶನ್ ಅಭಿನಯದ ದುರ್ಗದ ಪಾಳೆಗಾರ ಮದಕರಿನಾಯಕನ ಜೀವನ ಚರಿತ್ರೆಯ ಸಿನಿಮಾಗೆ ಚಾಲನೆ ಸಿಕ್ಕಿದೆ. ಇದುವರೆಗೆ ಚರ್ಚೆಯಾಗಿದ್ದಂತೆ ಚಿತ್ರದ ಹೆಸರು ಗಂಡುಗಲಿ ಮದಕರಿ ನಾಯಕ ಅಲ್ಲ, ರಾಜವೀರ ಮದಕರಿ ನಾಯಕ.
ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿತು. ದರ್ಶನ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಮುನಿರತ್ನ, ಸಂಸದೆ ಸುಮಲತಾ ಅಂಬರೀಷ್, ಶ್ರೀನಿವಾಸ ಮೂರ್ತಿ.. ಸೇರಿದಂತೆ ಚಿತ್ರತಂಡದವರು ಭಾಗವಹಿಸಿದ್ದರು.
ಅಂದಹಾಗೆ ಚಿತ್ರದಲ್ಲಿ ದರ್ಶನ್ ಅವರ ತಾಯಿಯಾಗಿ, ರಾಜಮಾತೆಯಾಗಿ ನಟಿಸುತ್ತಿರುವುದು ಸುಮಲತಾ ಅಂಬರೀಷ್. ಇದೇ ವೇಳೆ ನಿಮ್ಮ ದತ್ತು ಮಗ ದರ್ಶನ್ ಜೊತೆ ನಟಿಸುತ್ತಿದ್ದೀರಿ ಎಂಬ ಪ್ರಶ್ನೆಗೆ `ಅವನು ನನಗೆ ದತ್ತು ಮಗನಲ್ಲ, ಸ್ವಂತ ಮಗ' ಎಂದಿದ್ದಾರೆ ಸುಮಲತಾ.