` ಮತ್ತೊಂದು ಚಿನ್ನಮ್ಮ ಚಾಲೆಂಜ್ ಸ್ವೀಕರಿಸಿದ ಪ್ರಿಯಾಮಣಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
priyamani plays the role of chinama in thalaivi
Priyamani

ನಟಿ ಪ್ರಿಯಾಮಣಿ ಮತ್ತೊಮ್ಮೆ ಚಾಲೆಂಜ್ ಸ್ವೀಕರಿಸಿದ್ದಾರೆ. ಒಬ್ಬ ನಟಿಯಾಗಿ ಕೆರಿಯರ್‌ಗೇ ರಿಸ್ಕಿ ಎನ್ನಿಸುವ ಪಾತ್ರಗಳನ್ನು ಆಯ್ಕೆ ಮಾಡಿಕೊಂಡ, ಗೆದ್ದ ಪ್ರಿಯಾಮಣಿ ಈಗ ಮತ್ತೊಮ್ಮೆ ಅಂಥದ್ದೇ ಚಾಲೆಂಜ್ ಸ್ವೀಕರಿಸಿದ್ದಾರೆ. ಈಗ ಅವರು ಒಪ್ಪಿಕೊಂಡಿರುವುದು ಶಶಿಕಲಾ ಪಾತ್ರ.

ಕಂಗನಾ ರಣಾವತ್ ಜಯಲಲಿತಾ ಪಾತ್ರದಲ್ಲಿ ನಟಿಸುತ್ತಿರುವ ತಲೈವಿ ಚಿತ್ರದಲ್ಲಿ ಪ್ರಿಯಾಮಣಿ ಶಶಿಕಲಾ ಪಾತ್ರ ಮಾಡಲಿದ್ದಾರೆ. ಶಶಿಕಲಾ, ಜಯಲಲಿತಾ ಅವರ ಆಪ್ತ ಗೆಳತಿ. ಜಯಲಲಿತಾ ಸಮಾಧಿ ಎದುರು ಶಪಥ ಮಾಡಿದ್ದ ದೃಶ್ಯ ನೆನಪಿದೆಯಲ್ಲಾ.. ಅದೇ ಶಶಿಕಲಾ. ಪಾತ್ರ ಎಂಥದ್ದೇ ಆಗಿರಲಿ, ಜೀವ ತುಂಬುವ ಪ್ರಿಯಾಮಣಿ ಶಶಿಕಲಾ ಪಾತ್ರಕ್ಕೂ ಪರಕಾಯ ಪ್ರವೇಶ ಮಾಡುವುದು ದಿಟ.

Matthe Udbhava Trailer Launch Gallery

Maya Bazaar Pressmeet Gallery