ಈಗ ಥಿಯೇಟರಿನಲ್ಲಿರೋ ಬಬ್ರೂ ಚಿತ್ರದ ವಿಶಿಷ್ಟತೆಗಳಲ್ಲಿ ಇದೂ ಒಂದು. ಅದು ಕೇವಲ ಸುಮನ್ ನಗರ್‌ಕರ್ ಅವರ ಕಂಬ್ಯಾಕ್ ಸಿನಿಮಾ ಅಲ್ಲ, ಅಮೆರಿಕದವರೇ ಸೇರಿಕೊಂಡು ಸಿದ್ಧಪಡಿಸಿದ ಹಾಲಿವುಡ್ ಕನ್ನಡ ಸಿನಿಮಾ ಅಷ್ಟೇ ಅಲ್ಲ.. ಈ ಚಿತ್ರದಲ್ಲಿ ಕನ್ನಡಕ್ಕೆ ಹೊಸದಾದ ರೋಡ್ ಜರ್ನಿ ಕಥೆ ಇದೆ. ಜೊತೆಗೆ ನೀವು ಈ ಚಿತ್ರದಲ್ಲಿ ನೋಡುವ ಅಮೆರಿಕವನ್ನು ಭಾರತದ ಯಾವುದೇ ಭಾಷೆಯ ಚಿತ್ರದಲ್ಲೂ ನೋಡಿರೋಕೆ ಸಾಧ್ಯವಿಲ್ಲ. ಅಂತಹ ವಿಶಿಷ್ಟ ಸ್ಥಳಗಳನ್ನು ಹುಡುಕಿ ಶೂಟಿಂಗ್ ಮಾಡಿರುವ ಚಿತ್ರ ಬಬ್ರೂ.
ಸುಜಯ್ ರಾಮಯ್ಯ ನಿರ್ದೇಶನದ ಚಿತ್ರದಲ್ಲಿ ಇದುವರೆಗೆ ಸಿನಿಮಾ ಮಂದಿ ಬಳಸಿಕೊಳ್ಳದೇ ಇರುವ ಅಮೆರಿಕದ ಬೇರೆ ಬೇರೆ ಜಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಾಲಿವುಡ್ ತಂತ್ರಜ್ಞರೇ ಈ ಚಿತ್ರಕ್ಕೆ ಕೆಲಸ ಮಾಡಿದ್ದು, ಸುಮನ್ ಎದುರು ಮಹಿ ಹಿರೇಮಠ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.