` ನವರಸ ನಾಯಕನಿಂದ ಮತ್ತೊಮ್ಮೆ ಡೈರೆಕ್ಟರ್ ಅವತಾರ.. ಈ ಬಾರಿ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jaggesh turns director once again
Jaggesh Image

ನವರಸ ನಾಯಕ ಜಗ್ಗೇಶ್, ನಟ, ನಿರ್ಮಾಪಕ, ಗಾಯಕ ಹಾಗೂ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. 100ಕ್ಕೂ ಹೆಚ್ಚು ಸಿನಿಮಾ ಮಾಡಿರುವ ಜಗ್ಗೇಶ್ ಡೈರೆಕ್ಟರ್ ಆಗಿಯೂ ಒಂದು ಕೈ ನೋಡಿದ್ದಾರೆ.

2012ರಲ್ಲಿ ತಮ್ಮ ಪುತ್ರ ಗುರುರಾಜ್ ನಾಯಕನಾಗಿದ್ದ ಗುರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು ಜಗ್ಗೇಶ್. ನಂತರ ತಮ್ಮದೇ ಅಭಿನಯದಲ್ಲಿ ಮೇಲುಕೋಟೆ ಮಂಜ ಚಿತ್ರವನ್ನೂ ನಿರ್ದೇಶಿಸಿದ್ದರು. ಈಗ ಮತ್ತೊಮ್ಮೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಹೊಸ ಚಿತ್ರದಲ್ಲಿ ಜಗ್ಗೇಶ್ ಅವರ ಮಗ ಗುರು ಮತ್ತು ತಮ್ಮ ಕೋಮಲ್ ಇಬ್ಬರೂ ನಟಿಸುವ ಸಾಧ್ಯತೆ ಇದೆ.

ಕಥೆಯ ಒನ್ ಲೈನ್ ಪಕ್ಕಾ ಆಗಿದೆ. ಒಬ್ಬರಿಗೊಬ್ಬರು ಆಗದ, ವಿಭಿನ್ನ ವಿರುದ್ಧ ಮನಸ್ಸಿನ ವ್ಯಕ್ತಿತ್ವದ ಇಬ್ಬರು ವ್ಯಕ್ತಿಗಳು ಒಂದು ರಾತ್ರಿ ಒಟ್ಟಿಗೇ ಇರಬೇಕಾದ ಸ್ಥಿತಿ ಎದುರಾಗುತ್ತೆ. ಆಗ ನಡೆಯುವ ಹೈಡ್ & ಸೀಕ್ ಆಟ ಚಿತ್ರದ ಕಥೆ. ಒಂದು ಸೀರಿಯಸ್ ಪಾತ್ರ, ಭಯ ಹುಟ್ಟಿಸುತ್ತೆ. ಇನ್ನೊಂದು ಕಾಮಿಡಿ ಪಾತ್ರ, ನಗು ಉಕ್ಕಿಸುತ್ತೆ' ಎಂದು ಮಾಹಿತಿ ಕೊಟ್ಟಿದ್ದಾರೆ ಜಗ್ಗೇಶ್. ಆ ಒಂದು ರಾತ್ರಿಯ ಕಥೆ ಹೇಳೋಕೆ ಜಗ್ಗೇಶ್ ಶುರು ಮಾಡೋದು 2020ರ ಜನವರಿಯಲ್ಲಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery