ಸಿಂಪಲ್ ಸುನಿ, ಪುಷ್ಕರ್ ಮಲ್ಲಿಕಾರ್ಜುನಯ್ಯ, ಶರಣ್-ಅಶಿಕಾ ರಂಗನಾಥ್ ಚುಟು ಚುಟು ಕಾಂಬಿನೇಷನ್. ಜೊತೆಯಲ್ಲಿ ಶ್ರೀನಗರ ಕಿಟ್ಟಿ.ಸುಧಾರಾಣಿ, ಸಾಯಿಕುಮಾರ್. ಹೀಗಾಗಿಯೇ ಅವತಾರ ಪುರುಷನ ಹವಾ ಜೋರು. ಹೀಗೆ ಹವಾ ಸೃಷ್ಟಿಸಿರುವ ಅವತಾರ್ ಪುರುಷನ ಶೂಟಿಂಗ್ ಮುಕ್ತಾಯವಾಗಿದೆ.
ಮಾತಿನ ತುಂಟಾಟ ಮುಗಿದಿದ್ದು, ಜನವರಿಯಲ್ಲಿ ಹಾಡುಗಳ ಶೂಟಿಂಗ್‌ಗೆ ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ. ಜೊತೆಯಲ್ಲೇ ಡಬ್ಬಿಂಗ್ ಕೆಲಸವೂ ಶುರುವಾಗಿದೆ. ಟಾಕಿ ಪೋರ್ಷನ್ ಮುಗಿಸಿದ ನಂತರ ಹಾಡುಗಳ ಶೂಟಿಂಗ್‌ಗೆ ತೆರಳಲಿದೆಯಂತೆ ಚಿತ್ರತಂಡ. ಮಾರ್ಚ್-ಏಪ್ರಿಲ್‌ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.