` ಹಾಲಿವುಡ್ ಕನ್ನಡ ಚಿತ್ರ ಬಬ್ರೂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
hollywood kannada film is babru
Babru Movie Image

ಕನ್ನಡಿಗರ ಪಾಲಿನ ಎವರ್ ಗ್ರೀನ್ ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ಅಭಿನಯದ ಚಿತ್ರ ಬಬ್ರೂ. ಇತ್ತೀಚೆಗಷ್ಟೇ ಈ ಸಿನಿಮಾದ ಹಾಡು ಮತ್ತು ಟ್ರೇಲರ್ ಬಿಡುಗಡೆಯಾಗಿ ಕುತೂಹಲ ಹುಟ್ಟಿಸಿದೆ. ಅದಕ್ಕೆ ಕಾರಣವಾಗಿರೋದು ವಿಭಿನ್ನ ಕಥೆಯ ಲಕ್ಷಣ ಮತ್ತು ಅದರಲ್ಲಿನ ದೃಶ್ಯಗಳ ತಾಜಾತನ ಬೆರೆತ ಅದ್ಧೂರಿತನ. ಅಷ್ಟಕ್ಕೂ ಈ ಸಿನಿಮಾ ರೂಪುಗೊಂಡಿರುವ ರೀತಿಯೇ ಅಷ್ಟೊಂದು ವಿಶೇಷವಾಗಿದೆ. ಏಕೆಂದರೆ, ಈ ಇಡೀ ಚಿತ್ರವೇ ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣಗೊಂಡಿದೆ. ಇದು ಅಮೆರಿಕದಲ್ಲಿಯೇ ಚಿತ್ರೀಕರಣಗೊಂಡಿರುವ ಕನ್ನಡದ ಏಕೈಕ ಚಿತ್ರವೆಂಬ ಕೀರ್ತಿಗೂ ಭಾಜನವಾಗಿದೆ.

ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರೇ ರೂಪಿಸಿರುವು ಸಿನಿಮಾ ಬಬ್ರೂ. ಸುಜಯ್ ರಾಮಯ್ಯ ನಿರ್ದೇಶಕ. ಸುಮನ್ ನಗರ್ಕರ್ ಪ್ರಧಾನ ಪಾತ್ರವನ್ನೂ ನಿರ್ವಹಿಸಿದ್ದಾರೆ. ವಿಶೇಷವೆಂದರೆ ಇದರ ತಾಂತ್ರಿಕ ವರ್ಗದಲ್ಲಿಯೂ ಅಮೆರಿಕದವರೇ ಕಾರ್ಯ ನಿರ್ವಹಿಸಿದ್ದಾರೆ. ಒಂದಷ್ಟು ಮುಖ್ಯ ಪಾತ್ರಗಳನ್ನು ಅಮೆರಿಕದ ಕಲಾವಿದರು ನಿರ್ವಹಿಸಿದ್ದಾರೆ. ಇಷ್ಟೆಲ್ಲ ವಿಚಾರಗಳ ಆಧಾರದಲ್ಲಿ ನೋಡುವುದಾದರೆ ಇದನ್ನು ಹಾಲಿವುಡ್ ಕನ್ನಡ ಚಿತ್ರ ಎನ್ನಲಡ್ಡಿಯಿಲ್ಲ.