ಇದೇ ವಾರ ರಿಲೀಸ್ ಆದ ಮುಂದಿನ ನಿಲ್ದಾಣ ಚಿತ್ರ ವ್ಹಾವ್ ಎನ್ನಿಸುವಂತಾ ಸಾಧನೆ ಮಾಡಿಬಿಟ್ಟಿದೆ. ಕ್ಲಾಸ್ ವರ್ಗದ ಪ್ರೇಕ್ಷಕರನ್ನೇ ಟಾರ್ಗೆಟ್ ಆಗಿಟ್ಟುಕೊಂಡು ರೂಪಿಸಿರುವ ಸಿನಿಮಾ, ರೋಮಾಂಚನವನ್ನೇ ಸೃಷ್ಟಿಸಿಬಿಟ್ಟಿದೆ. ಹೇಗೆಂದರೆ ರಿಲೀಸ್ ಆದ ಎರಡನೇ ದಿನಕ್ಕೆ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿದೆ.
ಬೆಂಗಳೂರಿನ ಊರ್ವಶಿಯಲ್ಲಿ ಸಂಜೆ 6 ಗಂಟೆಗೆ ಎಕ್ಸಾ÷್ಟç ಶೋ ಕೊಟ್ಟಿದ್ದರೆ, ಮಲ್ಟಿಪ್ಲೆಕ್ಸುಗಳಲ್ಲಿ ಶೋ ಸಂಖ್ಯೆ ಹೆಚ್ಚಾಗಿವೆ.
ಇಟಿಎದಲ್ಲಿ 2, ಊರ್ವಶಿಯಲ್ಲೂ 2, ಆರ್‌ಎಂಝಡ್ ಐನಾಕ್ಸ್ 3, ಮಂಗಳೂರು ಬಿಗ್ ಸಿನಿಮಾ 2, ಮೈಸೂರು ವಿಷನ್ 2 ಶೋ ಹೆಚ್ಚಿಸಿವೆ. ಮುಂದಿನ ನಿಲ್ದಾಣ ತಮ್ಮ ಕಂಬ್ಯಾಕ್ ಚಿತ್ರ ಎಂದು ಹೇಳಿಕೊಂಡಿದ್ದರು ರಾಧಿಕಾ ನಾರಾಯಣ್.
ರಾಧಿಕಾ ನಾರಾಯಣ್, ಹೊಸ ಗ್ಲಾಮರ್ ಲುಕ್‌ನಲ್ಲಿ ಮಿಂಚು ಹರಿಸಿದ್ದರೆ, ಪ್ರವೀಣ್ ತೇಜ್, ಅನನ್ಯ ಮೋಡಿ ಮಾಡಿದ್ದರು. ಮೊದಲ ಚಿತ್ರದಲ್ಲೇ ವಿನಯ್ ಭಾರದ್ವಾಜ್ ತಾವೊಬ್ಬ ಪ್ರತಿಭಾವಂತ ನಿರ್ದೇಶಕ ಎಂದು ನಿರೂಪಿಸಿದ್ದರು. ಈಗ ಪ್ರೇಕ್ಷಕರ ಜೈಕಾರವೂ ಸಿಕ್ಕಿದೆ.