ಉಪೇಂದ್ರ ನಟಿಸುತ್ತಿರುವ ಕಬ್ಜ ಸಿನಿಮಾಗೆ ನಿರ್ದೇಶಕ ಆರ್.ಚಂದ್ರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಭರ್ಜರಿ ಸೆಟ್ ಹಾಕಿಸುತ್ತಿದ್ದಾರೆ. ಭೂಗತ ಜಗತ್ತಿನ ಚಟುವಟಿಕೆಗಳು ನಡೆಯುವಂತಹ ತಾಣದ ಸೆಟ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ ಚಂದ್ರು. ಉಪೇಂದ್ರ ೭ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದೇ ತೆಲುಗಿನಲ್ಲಿ ಭಾರಿ ಸುದ್ದಿಯಾಗಿದೆಯಂತೆ.
ಉಪೇAದ್ರ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದು, ಅವರು ವಾಪಸ್ ಬಂದ ಕೂಡಲೇ ಚಿತ್ರೀಕರಣ ಶುರುವಾಗಲಿದೆ. ಚಿತ್ರಕ್ಕೆ ನಾಯಕಿಯ ಆಯ್ಕೆ ಫೈನಲ್ ಹಂತದಲ್ಲಿದೆ ಎಂದಿರುವ ಚಂದ್ರು, ಖುದ್ದು ಹೈದರಾಬಾದ್‌ನಲ್ಲಿಯೇ ಇದ್ದುಕೊಂಡು ಸೆಟ್ ನಿರ್ಮಾಣದಲ್ಲಿ ಮುಳುಗಿದ್ದಾರೆ.