ಇದು ಪಕ್ಕಾ ಹೊಸತನದ ಕಥೆ. ಹೊಸತನದಿಂದಲೇ ಸ್ಯಾಂಡಲ್ವುಡ್ನಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಅಳಿದು ಉಳಿದವರು. ಮುಂದಿನ ವಾರ ರಿಲೀಸ್ ಆಗುತ್ತಿರುವ ಈ ಚಿತ್ರದಲ್ಲಿರೋದು ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿ. ಅರವಿಂದ್ ಶಾಸ್ತ್ರಿ ನಿರ್ದೇಶನದ ಚಿತ್ರದಲ್ಲಿ ಅಶು ಬೆದ್ರ ಹೀರೋ. ಅವರೇ ನಿರ್ಮಾಪಕರೂ ಹೌದು.
ಸಂಗೀತಾ ಭಟ್, ಪವನ್ ಕುಮಾರ್, ಅತುಲ್ ಕುಲಕರ್ಣಿ, ಬಿ.ಸುರೇಶ್ ಮೊದಲಾದವರು ನಟಿಸಿರುವ ಚಿತ್ರಕ್ಕೆ ಮಿಥುನ್ ಮುಕುಂದ್ ಸಂಗೀತವಿದೆ. ಜನಪ್ರಿಯ ಟಿವಿ ಚಾನೆಲ್ನ ಜನಪ್ರಿಯ ಶೋವೊಂದರ 100ನೇ ಸಂಚಿಕೆ ರೂಪಿಸುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳೇ ಚಿತ್ರದ ಕಥೆ. ಟಿಆರ್ಪಿ ಕಥೆ ಹೇಳುವ ಅಳಿದು ಉಳಿದವರು ಸಿನಿಮಾದಲ್ಲಿ, ಹಲವು ನಿಗೂಢ ಪ್ರಶ್ನೆಗಳಿಗೆ ಉತ್ತರವೂ ಇದೆ. ಅವು ಸಿಗುವುದು ಡಿಸೆಂಬರ್ 6ಕ್ಕೆ.