ನಿರ್ದೇಶಕ, ನಟ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಅದ್ಭುತ ಗೆಳೆಯರು. ಅದು ಇಡೀ ಚಿತ್ರರಂಗಕ್ಕೇ ಗೊತ್ತು. ಆದರೆ, ಅವನೇ ಶ್ರೀಮನ್ನಾರಾಯಣದಲ್ಲಿ ಅವರೂ ಇದ್ದಾರೆ ಎನ್ನುವ ಸತ್ಯ ಗೊತ್ತಾಗಿದ್ದು, ಟ್ರೇಲರ್ ರಿಲೀಸ್ ಆದ ಮೇಲೆ. ಅಂಥಾದ್ದೊಂದು ಅಚ್ಚರಿ ಕೊಟ್ಟ ರಿಷಬ್, ಗೆಳೆಯನ ಸಿನಿಮಾದ ಬಗ್ಗೆ ಹೇಳಿದ್ದು ಈ ಮಾತು.
‘ರಕ್ಷಿತ್ ಸಿನಿಮಾ ಅಂದ್ಮೇಲೆ ನಾನು ಇರಲೇ ಬೇಕು. ಅದು ನನ್ನ ಹಕ್ಕು. ನನ್ನ ಅಧಿಕಾರ’ ಎಂದಿದ್ದಾರೆ ರಿಷಬ್. ಗೆಳೆಯನ ಸಿನಿಮಾ ಸಕ್ಸಸ್ ಆಗಬೇಕು, ಅದಕ್ಕಾಗಿ ಕಾಯುತ್ತಿದ್ದೇನೆ ಎಂದಿರುವ ರಿಷಬ್ ಶೆಟ್ಟಿಯ ಈ ಮಾತು ಅಭಿಮಾನಿಗಳನ್ನು ಥ್ರಿಲ್ ಆಗಿಸಿದೆ.
ರಿಷಬ್ ನಿರ್ದೇಶನದ ಮೊದಲ ಚಿತ್ರ ರಿಕ್ಕಿ. 2ನೇ ಸಿನಿಮಾ ಕಿರಿಕ್ ಪಾರ್ಟಿ. ಒಂದು ಌವರೇಜ್ ಹಿಟ್, ಇನ್ನೊಂದು ಭಯಂಕರ ಹಿಟ್. ಚಿತ್ರರಂಗದ ಹೊರಗೂ ಸ್ನೇಹ ಉಳಿಸಿಕೊಂಡಿರುವ ಇಬ್ಬರೂ.. ಹೀಗೆಯೇ ನೂರ್ಕಾಲ ಸ್ನೇಹಿತರಾಗಿರಲಿ.