ಮುಂದಿನ ನಿಲ್ದಾಣ, ಕ್ಲಾಸ್ ವರ್ಗದವರ ಕಥೆ. ಸಾಫ್ಟ್ವೇರ್ ಎಂಜಿನಿಯರ್ ಕಂ ಫೋಟೋಗ್ರಾಫರ್ ನಾಯಕ ಪಾರ್ಥ. ಇನ್ನೊಬ್ಬಳು ಆರ್ಟ್ ಕ್ಯುರೇಟರ್ ಮೀರಾ, ಡಾಕ್ಟರ್ ಅಹನಾ.. ಈ ಮೂರು ಪಾತ್ರಗಳ ನಡುವೆ ಸಾಗುವ ವಿಭಿನ್ನ ಪ್ರೇಮಕಥೆ. ರಾಧಿಕಾ ನಾರಾಯಣ್, ಅನನ್ಯ ಕಶ್ಯಪ್ ಮಧ್ಯೆ ಪ್ರವೀಣ್ ತೇಜ್ ಮೂವರೂ ಪಾತ್ರಗಳನ್ನು ಜೀವಿಸಿದಂತೆ ನಟಿಸಿದ್ದಾರೆ.
ಜೀವನಕ್ಕೆ, ಸಂಸಾರಕ್ಕೆ ಮದುವೆ ಎಂಬ ಬಂಧನ ಬೇಕಾ..? ಯಾರೊಬ್ಬರ ಮುಲಾಜಿನಲ್ಲೂ ಇಲ್ಲದೆ ಬದುಕುವುದು ಸಾಧ್ಯವಿಲ್ಲವಾ..? ಇಂತಹ ಪ್ರಶ್ನೆಗಳ ಹುಡುಕಾಟದಲ್ಲಿಯೇ ಸುಂದರ ಕನಸು ಕಾಣುವ, ನೋವು ತಿನ್ನುವ ಯುವಕ, ಯುವತಿಯರ ಬದುಕು..ಎಲ್ಲಿಗೆ ನಿಲ್ಲುತ್ತೆ..?
ಎಲ್ಲಿಯೂ ನಿಲ್ಲುವುದಿಲ್ಲ ಎನ್ನುವ ನಿರ್ದೇಶಕ ವಿನಯ್ ಭಾರದ್ವಾಜ್, ಕ್ಲೈಮಾಕ್ಸ್ ತೋರಿಸದೆಯೇ ಕ್ಲೈಮಾಕ್ಸ್ ತಲುಪಿಸಿರುವ ರೀತಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ವಿಶೇಷವಾಗಿ.. ಕ್ಲಾಸ್ ವರ್ಗದ ಪ್ರೇಕ್ಷಕರಿಗೆ. ಮುಂದಿನ ನಿಲ್ದಾಣ ಎನ್ನುವುದು ಅಂತ್ಯವಲ್ಲ.. ಆರಂಭ ಎನ್ನುವಲ್ಲಿಯೇ ನಿರ್ದೇಶಕರ ಕ್ಲಾಸಿಕ್ ಟಚ್ ಇಷ್ಟವಾಗುತ್ತೆ.