ಹಿಡ್ಕ ಹಿಡ್ಕ ಹಿಡ್ಕ ಎನ್ನುತ್ತಲೇ ರೋಮಾಂಚನ ಹುಟ್ಟಿಸಿದ್ದ ಬ್ರಹ್ಮಚಾರಿಯನ್ನು ಪ್ರೇಕ್ಷಕರು ಅಷ್ಟೇ ಪ್ರೀತಿಯಿಂದ ಹಿಡಿದುಕೊಂಡಿದ್ದಾರೆ. ಸತೀಶ್ ಮತ್ತು ಆದಿತಿಯ ತುಂಟಾಟ, ರನೌಟ್ ಕಥೆಗೆ ಬೆರೆಸಿರುವ ಕಾಮಿಡಿಯ ಒಗ್ಗರಣೆ, ಪ್ರೇಕ್ಷಕರಿಗೆ ನಗೆಯೂಟದ ಮೃಷ್ಟಾನ್ನ ಭೋಜನವನ್ನೇ ನೀಡಿದೆ. ಥಿಯೇಟರಿಗೆ ಎಂಟ್ರಿ ಕೊಟ್ಟು ಸಿನಿಮಾ ಶುರುವಾದ ಮೇಲೆ ನಗಲು ಶುರು ಮಾಡುವ ಪ್ರೇಕ್ಷಕ, ಸಿನಿಮಾ ಮುಗಿಯುವವರೆಗೂ ನಗುತ್ತಲೇ ಇರುತ್ತಾನೆ ಎನ್ನುವುದರಲ್ಲಿಯೇ ಚಿತ್ರತಂಡದ ಗೆಲುವಿದೆ.
ನಿರ್ದೇಶಕ ಚಂದ್ರಮೋಹನ್, ನಿರ್ಮಾಪಕ ಉದಯ್ ಇಬ್ಬರೂ ಕೂಡಾ ಚಿತ್ರದಲ್ಲಿ ಲೈಂಗಿಕ ಸಮಸ್ಯೆಯ ಕಥೆ ಇದ್ದರೂ, ಎಲ್ಲಿಯೂ ಅಶ್ಲೀಲತೆಯ ಸೋಂಕಿಲ್ಲ ಎಂದು ಭರವಸೆ ಕೊಟ್ಟಿದ್ದರು. ಭರವಸೆ ಹುಸಿಯಾಗಿಲ್ಲ. ತುಂಟಾಟಕ್ಕೆ ಮಿತಿಯಿಲ್ಲ.
ಧರ್ಮವಿಶ್ ಸಂಗೀತದಲ್ಲಿ ಬರುವ ಹಾಡುಗಳು ಹುಚ್ಚೆಬ್ಬಿಸಿದರೆ, ಆದಿತಿಯ ನೋಟಕ್ಕೇ ಪ್ರೇಕ್ಷಕ ಫಿದಾ ಆಗಿಬಿಡುತ್ತಾನೆ. ಸತೀಶ್ ಜೊತೆ ನಗಿಸಲು ಪೈಪೋಟಿಗೆ ಬೀಳುವುದು ಕೆ.ಆರ್.ಪೇಟೆ ಶಿವರಾಜ್. ಫೈನಲಿ.. ಪ್ರೇಕ್ಷಕರೂ ಹ್ಯಾಪಿ.. ನಿರ್ಮಾಪಕರು ಡಬಲ್ ಹ್ಯಾಪಿ.