ರಾಧಿಕಾ ನಾರಾಯಣ್ ಪ್ರಧಾನ ಪಾತ್ರದಲ್ಲಿರುವ ಮುಂದಿನ ನಿಲ್ದಾಣ ಈಗ ಚಿತ್ರಮಂದಿರಗಳಲ್ಲಿದೆ. ಚಿತ್ರದ ನಾಯಕಿ ರಾಧಿಕಾ ನಾರಾಯಣ್. ರಂಗಿತರಂಗದ ಮೂಲಕ ರಾಧಿಕಾ ಚೇತನ್ ಆಗಿ ಮಿಂಚು ಹರಿಸಿದ್ದವರು ಈಗ ರಾಧಿಕಾ ನಾರಾಯಣ್ ಆಗಿದ್ದಾರೆ. ಅರೆ.. ಅವರೆಲ್ಲಿ ದೂರ ಹೋಗಿದ್ದಾರೆ. ಗ್ಯಾಪ್ ಕೂಡಾ ಇಲ್ಲವಲ್ಲ.. ಅದು ಹೇಗೆ ರೀ ಎಂಟ್ರಿ ಎನ್ನುತ್ತಿದ್ದವರಿಗೆ ಸ್ವತಃ ರಾಧಿಕಾ ಉತ್ತರ ಕೊಟ್ಟಿದ್ದಾರೆ.
ಇದುವರೆಗೆ ನಾನು ಮಾಡಿದ ಚಿತ್ರಗಳು ಸಸ್ಪೆನ್ಸ್ ಥ್ರಿಲ್ಲರ್, ಹಾರರ್ ಜಾನರ್ ಸಿನಿಮಾಗಳು. ಹೀಗಾಗಿ ಸೀರಿಯಸ್ ಆಗಿಯೋ, ಗೃಹಿಣಿಯಾಗಿಯೋ ಕಾಣಿಸಿಕೊಂಡಿದ್ದೆ. ನನ್ನನ್ನು ನಾನು ಚಾರ್ಮಿಂಗ್ ಆಗಿ, ಸ್ಟೆಟೀಲಿಷ್ ಆಗಿ ತೋರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅದು ಮುಂದಿನ ನಿಲ್ದಾಣದಲ್ಲಿ ಸಾಧ್ಯವಾಗಿದೆ. ಹೀಗಾಗಿಯೇ ಇದನ್ನು ನಾನೇ ಮರು ಎಂಟ್ರಿ ಎನ್ನುತ್ತಿದ್ದೇನೆ' ಎನ್ನುತ್ತಾರೆ ರಾಧಿಕಾ.
ಚಿತ್ರದಲ್ಲಿ ಮೀರಾ ಶರ್ಮಾ ಎಂಬ ಪಾತ್ರ ಮಾಡಿರುವ ರಾಧಿಕಾ ಆರ್ಟ್ ಕ್ಯುರೇಟರ್ ಆಗಿರುತ್ತಾಳೆ. ಬೆಟ್ಟದಷ್ಟು ಕನಸಿರುವ ಹುಡುಗಿ, ಸಂಗಾತಿಯ ಹುಡುಕಾಟದಲ್ಲಿರುತ್ತಾಳೆ. ಅದೇ ಅವಳ ಮುಂದಿನ ನಿಲ್ದಾಣ. ಆಗ ನಡೆಯುವ ಅನಿರೀಕ್ಷಿತ ಘಟನೆಗಳೇ ಚಿತ್ರದ ಕಥೆ.
ಪ್ರವೀಣ್ ತೇಜ್ ನಾಯಕ. ಅನನ್ಯ ಕಶ್ಯಪ್ ಇನ್ನೊಂದು ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ವಿನಯ್ ಭಾರದ್ವಾಜ್ ನಿರ್ದೇಶಕ.