ಆತ ಅತ್ಯಂತ ಪ್ರಾಮಾಣಿಕ ಹುಡುಗ. ಶೀಲ ಎನ್ನುವುದು ಹುಡುಗರಿಗೂ ಇರಬೇಕು, ನಾನು ಮದುವೆಯಾಗುವವರೆಗೂ ವರ್ಜಿನ್ ಆಗಿರಬೇಕು ಎಂದು ನಿರ್ಧರಿಸಿ, ಹಾಗೆಯೇ ಬದುಕಿರುವ ಹುಡುಗ. ಅವನಿಗೆ ಮದುವೆಯಾಗುತ್ತೆ. ಅಲ್ಲಿಂದ ಸಮಸ್ಯೆ ಶುರು.
ಇದು ಬಹುಪಾಲು ಯುವಕರ ಸಮಸ್ಯೆ. ಆದರೆ, ಹೊರಬರುವುದು ಕಡಿಮೆ. ಅಷ್ಟೇ ಏಕೆ, ಎಷ್ಟೋ ಸಂಸಾರಗಳು ಇದೊಂದು ಸಮಸ್ಯೆಯಿಂದಾಗಿ ದಿಕ್ಕಾಪಾಲಾಗಿರುವುದೂ ಇದೆ. ಬ್ರಹ್ಮಚಾರಿ ಈ ಕಥೆಯನ್ನು ಹಾಸ್ಯದ ಹಾದಿಯಲ್ಲಿ ತೆಗೆದುಕೊಂಡು ಹೋಗುತ್ತಾನೆ.
ಇಲ್ಲಿ ಬ್ರಹ್ಮಚಾರಿಯಂತಹ ಪಾತ್ರ ಮಾಡಿದ ಸತೀಶ್ ಧೈರ್ಯವನ್ನಂತೂ ಮೆಚ್ಚಲೇಬೇಕು. ಅಯೋಗ್ಯದಂತಹ ಹಿಟ್ ಸಿನಿಮಾ, ಚಂಬಲ್ ನಂತಹ ಸಿನಿಮಾದಲ್ಲಿ ಐಎಎಸ್ ಅಧಿಕಾರಿಯ ಪಾತ್ರದಲ್ಲಿ ಗಮನ ಸೆಳೆದಿರುವ ಸತೀಶ್‌ಗೆ ಈಗ ಇರುವ ಇಮೇಜ್ ಬೇರೆ. ಆದರೆ, ಇಮೇಜ್‌ಗಳಿಂದ ಹೊರಬರುವವನೇ ಕಲಾವಿದ ಎನ್ನುವ ಸತೀಶ್, ಬ್ರಹ್ಮಚಾರಿಯಾಗಿ ನಟಿಸಿದ್ದಾರೆ. ಆದಿತಿ ಪ್ರಭುದೇವ ಮಿಂಚು ಹರಿಸಿದ್ದಾರೆ. ಕಥೆ ನಿರ್ಮಾಪಕ ಉದಯ್ ಅವರದ್ದೇ. ಬಾಂಬೆ ಮಿಠಾಯಿ, ಡಬಲ್ ಎಂಜಿನ್ ಸಿನಿಮಾಗಳ ನಂತರ ಚಂದ್ರಮೋಹನ್ ಮತ್ತೊಮ್ಮೆ ಕಾಮಿಡಿಯನ್ನೇ ಹಿಡಿದು ಬಂದಿದ್ದಾರೆ. ನಗೆಯ ಹಬ್ಬಕ್ಕೆ ಸಿದ್ಧರಾಗಿ.