ಇಡೀ ಚಿತ್ರತಂಡವೇ ಹಾಗಿದೆ. ಚಿತ್ರದ ನಿರ್ಮಾಪಕರು ಒಬ್ಬರಲ್ಲ, ನಾಲ್ವರು. ಮುರಳೀಧರ ಸರಳಿ, ಶೇಷಾದ್ರಿ ಉಡುಪ, ತಾರಾನಾಥ್ ರೈ ಮತ್ತು ಡಾ.ಸುರೇಖ್ ಕುಮಾರ್. ಸಾಫ್ಟ್ವೇರ್ ಮತ್ತು ವೈದ್ಯಕೀಯ ಲೋಕದವರು. ಸಿನಿಮಾ ಲೋಕಕ್ಕೆ ಬರಲು ಕಾರಣ ಇಷ್ಟೆ..
ಎಲ್ಲರೂ ಹಳ್ಳಿಗಾಡಿನಿಂದ ಬಂದವರು. ಸಿನಿಮಾಗಳ ಆಕರ್ಷಕ ಕಲ್ಪನೆಯಲ್ಲಿ ತೇಲಿ ತೇಲಿ ಹೋಗಿದ್ದವರು. ಈಗ ಹೊಸ ಪ್ರತಿಭೆಗಳಿಗೆ, ಹೊಸ ಕಥೆಗೆ, ಹೊಸ ಅನುಭವಕ್ಕೆ, ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಮುಂದಿನ ನಿಲ್ದಾಣ ಎಂಬ ಮಾಡರ್ನ್ ಜಗತ್ತಿನ ಕಥೆ ಸೃಷ್ಟಿಯಾಗಿದೆ.
ಸಿನಿಮಾದಲ್ಲಿ ಒಳ್ಳೆಯ ಕಂಟೆAಟ್ ಇದೆ. ಕಂಟೆAಟ್ ಇರುವ ಸಿನಿಮಾಗಳು ಗೆದ್ದಿವೆ. ಒಳ್ಳೆಯ ಕಥೆ ಸಿಕ್ಕರೆ ನಾವೇಕೆ ಸಿನಿಮಾ ಮಾಡಬಾರದು ಎಂದುಕೊAಡಿದ್ದಾಗ ಸಿಕ್ಕ ಕಥೆ ಇದು. ನಮ್ಮನ್ನು ನಿರ್ಮಾಪಕರಾಗಿಸಿದ್ದು ಇದೇ ಕಥೆ ಎನ್ನುತ್ತಾರೆ ನಿರ್ಮಾಪಕರಲ್ಲೊಬ್ಬರಾದ ಮುರಳೀಧರ ಸರಳಿ.
ಮುಂದಿನ ನಿಲ್ದಾಣ ಒಂದು ಟೀಂ ವರ್ಕ್ನಿಂದ ಸೃಷ್ಟಿಯಾದ ಸಿನಿಮಾ. ನೈಜತೆಯೇ ಪ್ರಧಾನವಾಗಿರುವ ಚಿತ್ರದಲ್ಲಿ ಫ್ಯಾಂಟಸಿ ಇಲ್ಲ. ಈಗ ಥಿಯೇಟರುಗಳಲ್ಲಿರುವ ಸಿನಿಮಾ ಖಂಡಿತಾ ಪ್ರೇಕ್ಷಕರಿಗೆ ಇಷ್ಟವಾಗುವ ಸಾಧ್ಯತೆ ಇದೆ.