ಈಗ ಥಿಯೇಟರುಗಳಲ್ಲಿರುವ ದಮಯಂತಿ, ಕನ್ನಡದಲ್ಲಿ ಅಪರೂಪದ ಸಿನಿಮಾ ಎನ್ನಲಡ್ಡಿಯಿಲ್ಲ. ಚಿತ್ರದ ವಿಶೇಷತೆಯೆಂದರೆ ರಾಧಿಕಾ ಕುಮಾರಸ್ವಾಮಿ. ರುದ್ರತಾಂಡವ ಚಿತ್ರದ ನಂತರ ಬರುತ್ತಿರುವ ಮೊದಲ ಸಿನಿಮಾ ಇದು. ದಮಯಂತಿ. ಒಟ್ಟಾರೆ 4 ವರ್ಷಗಳ ಸುದೀರ್ಘ ಗ್ಯಾಪ್.
ಈ 4 ವರ್ಷಗಳಲ್ಲಿ ರಾಧಿಕಾ ಇನ್ನಷ್ಟು ಸ್ಮಾರ್ಟ್ ಆಗಿದ್ದಾರೆ. ಆದರೆ, ದಮಯಂತಿಯಲ್ಲಿ ಮಾಡರ್ನ್ ಹುಡುಗಿಯಾಗಿ, ಅಘೋರಿಯಾಗಿ.. ಭಯ ಹುಟ್ಟಿಸುತ್ತಾರೆ. ಮೇಕಪ್‌ಗಾಗಿಯೇ ಪ್ರತಿದಿನ 3 ಗಂಟೆ ವ್ಯಯಿಸಿರುವ ರಾಧಿಕಾ ಕುಮಾರಸ್ವಾಮಿಗೆ, ಅಭಿಮಾನಿಗಳು ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಿದೆ.
ನಿರ್ದೇಶಕ ನವರಸನ್, ಚಿತ್ರವನ್ನು ಮೊದಲು ತೆಲುಗಿನಲ್ಲಿ ಮಾಡಬೇಕು ಎಂದುಕೊAಡಿದ್ದರAತೆ. ಇದಕ್ಕಾಗಿ ಅನುಷ್ಕಾ ಶೆಟ್ಟಿ ಅವರನ್ನು ಕಾಂಟ್ಯಾಕ್ಟ್ ಕೂಡಾ ಮಾಡಿದ್ದರಂತೆ. ನಂತರ ಕನ್ನಡಲದಲ್ಲಿ ಈ ಸಿನಿಮಾ ಮಾಡಬೇಕು ಎಂದು ಹೊರಟಾಗ, ರಾಧಿಕಾ ಕುಮಾರಸ್ವಾಮಿ ಬಿಟ್ಟು ಬೇರೆಯ ಮುಖವೂ ಕಣ್ಣ ಮುಂದೆ ಬರಲಿಲ್ಲ ಎನ್ನುತ್ತಾರೆ ನವರಸನ್.