` ಅಬ್ಬಾ..! ಈ ವಾರ ರಿಲೀಸ್ ಆಗುತ್ತಿರೋದು 42 ಸಿನಿಮಾಗಳು..!! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
42 films to release in karnataka this week
Bramhachari, Mundina Nildana Movie Images

ಇದು ಪ್ರವಾಹಗಳ ವರ್ಷ. ಸಿನಿಮಾ ರಂಗವೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಪ್ರವಾಹವೇ ಹರಿದಿದೆ. ಅದರಲ್ಲೂ ಈ ವಾರ.. ಒಂದಲ್ಲ.. ಎರಡಲ್ಲ.. ಒಟ್ಟು 42 ಸಿನಿಮಾಗಳು ಶುಕ್ರವಾರ ರಿಲೀಸ್ ಆಗುತ್ತಿವೆ. ಬೆಂಗಳೂರಿನಲ್ಲಿ.

ಈ ವಾರ ಬೆಂಗಳೂರಿನಲ್ಲಿ ರಿಲೀಸ್ ಆಗುತ್ತಿರುವ ಕನ್ನಡ ಚಿತ್ರಗಳ ಸಂಖ್ಯೆ 9. 8 ತೆಲುಗು, 6 ಬೆಂಗಾಲಿ ಮತ್ತು 6 ಹಿಂದಿ. ಮಲಯಾಳಂನ 4 ಹಾಗೂ ತಮಿಳು ಮತ್ತು ಇಂಗ್ಲಿಷ್‌ನ ತಲಾ 3, ಗುಜರಾತಿ ಮತ್ತು ಮರಾಠಿಯ ತಲಾ 2, ಒಂದು ಪಂಜಾಬಿ ಸಿನಿಮಾ. ತಿಂಗಳಿಗೆ ಕನಿಷ್ಠ ಎರಡಾದರೂ ಬೋಜ್‌ಪುರಿ(ಬಿಹಾರ) ಸಿನಿಮಾಗಳು ರಿಲೀಸ್ ಆಗುತ್ತವೆ. ಈ ಬಾರ ಮೊದಲೇ ಪ್ಲಾನ್ ಆಗಿರುವ ಲಿಸ್ಟಿನಲ್ಲಿಲ್ಲ, ಅಷ್ಟೆ. ಈ ಎಲ್ಲವೂ ಸೇರಿ ಒಟ್ಟು 42 ಸಿನಿಮಾಗಳಾಗುತ್ತಿವೆ.

ಎಲ್ಲರೂ ತೆಲುಗು, ತಮಿಳು, ಹಿಂದಿ ಅಷ್ಟೇ ಪರಭಾಷೆ ಚಿತ್ರಗಳೆಂದುಕೊAಡಿರುವಾಗ ಅವುಗಳಿಗೆ ಪೈಪೋಟಿ ಕೊಡುವಂತೆ ಬೆಂಗಾಳಿ, ಗುಜರಾತಿಗಳು ಬೆಂಗಳೂರಿಗೆ ಪ್ರವೇಶಿಸಿ ಆಗಿದೆ. ರಾಜ್ಯದಲ್ಲಿ.. ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡವೂ ಸೇರಿ ಒಟ್ಟು 10 ಭಾಷೆಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಜಪಾನೀಸ್, ಅಸ್ಸಾಮೀ ಭಾಷೆಯ ಚಿತ್ರಗಳೂ ಆಗಾಗ್ಗೆ ಥಿಯೇಟರುಗಳಲ್ಲಿ ಪ್ರತ್ಯಕ್ಷವಾಗುತ್ತಿವೆ. ಇವೆಲ್ಲವುಗಳ ಜೊತೆಗೆ ಕನ್ನಡ ಸ್ಪರ್ಧೆ ಮಾಡಲೇಬೇಕು, ಅದು ಅನಿವಾರ್ಯ.

ಬೆಂಗಳೂರಿನಲ್ಲಿ ಇರುವುದೇ 100+ ಸಿಂಗಲ್ ಸ್ಕಿçÃನ್ ಮತ್ತು 100+ ಮಲ್ಟಿಪ್ಲೆಕ್ಸುಗಳು. ಇವುಗಳಲ್ಲಿ ಹಿಂದಿ ಬಿಟ್ಟರೆ, ಆಲ್‌ಮೋಸ್ಟ್ ಎಲ್ಲ ಭಾಷೆಗಳವರೂ ಸಿಂಗಲ್ ಸ್ಕಿçÃನ್‌ಗೆ ಲಗ್ಗೆಯಿಡುತ್ತಾರೆ. ಸದ್ಯಕ್ಕೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡದಷ್ಟೇ ದೊಡ್ಡ ಮಟ್ಟದಲ್ಲಿ ತೆಲುಗು, ತಮಿಳು ಚಿತ್ರಗಳೂ ರಿಲೀಸ್ ಆಗುತ್ತಿವೆ. ಮುಂದಿನ ದಿನಗಳಲ್ಲಿ ಬೆಂಗಾಳಿ, ಭೋಜ್‌ಪುರಿ, ಮಲಯಾಳಂ ಇದೇ ರೀತಿಯಲ್ಲಿ ರಿಲೀಸ್ ಆಗಲು ಕ್ಯೂನಲ್ಲಿವೆ.

ಇನ್ನು ಈ ವಾರ ರಿಲೀಸ್ ಆಗುತ್ತಿರುವ ಕನ್ನಡ ಚಿತ್ರಗಳನ್ನಷ್ಟೇ ನೋಡೋಣ. ಬ್ರಹ್ಮಚಾರಿ,  ಮುಂದಿನ ನಿಲ್ದಾಣ, ರಣಹೇಡಿ, ಮೂಕಜ್ಜಿಯ ಕನಸುಗಳು, ಮಾರ್ಗರೇಟ್, ಕಿರು ಮಿಂಕAಜ, ರಿವೀಲ್, ದಮಯಂತಿ, ನಾನೇ ರಾಜ ಚಿತ್ರಗಳು. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery