ಬ್ರಹ್ಮಚಾರಿ ರಿಲೀಸ್ ಸಂಭ್ರಮದಲ್ಲಿರೋ ನಟ ನೀನಾಸಂ ಸತೀಶ್ ಮತ್ತು ನಿರ್ಮಾಪಕ ಉದಯ್ ಕೆ.ಮೆಹ್ತಾ ಇಬ್ಬರಿಗೂ ನವೆಂಬರ್ ಎಂದರೆ ಲಕ್ಕಿ ಎನ್ನಿಸೋಕೆ ಕಾರಣವೂ ಇದೆ. ಕಾರಣ ಇಷ್ಟೆ, 2014ರ ನವೆಂಬರ್ 28ರಂದು ಲವ್ ಇನ್ ಮಂಡ್ಯ ರಿಲೀಸ್ ಆಗಿತ್ತು. ಈಗ ನವೆಂಬರ್ 29, ಬ್ರಹ್ಮಚಾರಿ ರಿಲೀಸ್ ಆಗುತ್ತಿದೆ.
ಆ ಚಿತ್ರದ ನಿರ್ಮಾಪಕ ಮತ್ತು ನಾಯಕ ಇಬ್ಬರೂ ಈ ಚಿತ್ರದಲ್ಲೂ ಜೊತೆಯಾಗಿದ್ದಾರೆ. ಆ ಚಿತ್ರದಲ್ಲಿ ನೀನಾಸಂ ಸತೀಶ್ ಜೊತೆ ಸಿಂಧು ಲೋಕನಾಥ್ ನಾಯಕಿ. ಇಲ್ಲಿ ಸತೀಶ್ ಜೊತೆ ಆದಿತಿ ಪ್ರಭುದೇವ ನಾಯಕಿ.
ಬ್ರಹ್ಮಚಾರಿಯಂತೆಯೇ ಲವ್ ಇನ್ ಮಂಡ್ಯದ ಎಲ್ಲ ಹಾಡುಗಳೂ ಹಿಟ್ ಆಗಿದ್ದವು. ಈ ಬ್ರಹ್ಮಚಾರಿಯಲ್ಲಿ ಹಿಡ್ಕ ಹಿಡ್ಕ ಹಾಡು ಸೃಷ್ಟಿಸಿದ್ದ ರೋಮಾಂಚನದAತೆಯೇ.. ಲವ್ ಇನ್ ಮಂಡ್ಯದಲ್ಲಿ ಕರೆಂಟು ಹೋದ ಟೈಮಲಿ.. ಹಾಡು ರೊಮ್ಯಾಂಟಿಕ್ ಸೆನ್ಸೇಷನ್ ಆಗಿತ್ತು.