ದೆವ್ವ ಎಂದರೆ ಮನುಷ್ಯರು ಹೆದರಬೇಕು, ಆದರೆ, ಮನೆ ಮಾರಾಟಕ್ಕಿದೆ ಚಿತ್ರದಲ್ಲಿ ಎಲ್ಲವೂ ಉಲ್ಟಾ. ಅಲ್ಲಿ ಆಗಾಗ್ಗೆ ದೆವ್ವಗಳನ್ನೇ ಮನುಷ್ಯರು ಹೆದರಿಸುವ ಕಥೆ, ಸನ್ನಿವೇಶಗಳಿವೆ. ಪ್ರೇಕ್ಷಕರಿಗೆ ಇಷ್ಟವಾಗಿರುವುದೇ ಅದು. ಕಿಚ್ಚ ಸುದೀಪ್ ಅವರಿಗೂ ಕೂಡಾ.
ದೆವ್ವಗಳನ್ನೇ ಹೆದರಿಸುವ ಐಡಿಯಾ ಹೊಸದು. ಕುರಿ ಪ್ರತಾಪ್, ರವಿಶಂಕರ್ ಗೌಡ, ಸಾಧು ಕೋಕಿಲ, ಚಿಕ್ಕಣ್ಣ ಅಭಿನಯ ಅತ್ಯುತ್ತಮವಾಗಿದೆ. ಶ್ರುತಿ ಹರಿಹರನ್ ಅವರನ್ನಂತೂ ತೆರೆಯ ಮೇಲೆ ನೋಡುವುದೇ ಚೆಂದ ಎಂದು ಇಡೀ ಚಿತ್ರತಂಡವನ್ನೇ ಹೊಗಳಿದ್ದಾರೆ ಕಿಚ್ಚ ಸುದೀಪ್.
ಸ್ವಲ್ಪ ಹೊತ್ತು ಸಿನಿಮಾ ನೋಡುತ್ತೇನೆ. ಇಷ್ಟವಾದರೆ ಮಾತ್ರ ಪೂರ್ತಿ ಸಿನಿಮಾ ನೋಡುತ್ತೇನೆ ಎಂದು ಷರತ್ತು ಹಾಕಿ ಕುಳಿತ ಸುದೀಪ್, ಇಡೀ ಚಿತ್ರ ನೋಡಿ, ಮೆಚ್ಚಿದ್ದಾರೆ. ನಿರ್ದೇಶಕ ಮಂಜು ಸ್ವರಾಜ್ ಅವರ ಬೆನ್ನು ತಟ್ಟಿದ್ದಾರೆ. ನಿರ್ಮಾಪಕ ಎಸ್.ವಿ.ಬಾಬು ಫುಲ್ ಹ್ಯಾಪಿ.