ಮುಂದಿನ ನಿಲ್ದಾಣ, ಯಾವ ಕೆಟಗರಿಯ ಸಿನಿಮಾ..? ಚಿತ್ರದ ಟ್ರೇಲರ್ ನೋಡಿದವರಿಗೆ ಹುಟ್ಟುವ ಕುತೂಹಲ ಅದು. ಕ್ಲಾಸಿಕ್ ಎನ್ನಿಸುವ ಟ್ರೇಲರ್, ವ್ಹಾವ್ ಎನ್ನಿಸುವ ನಾಯಕಿಯರ ಚೆಲುವು ಮತ್ತು ವ್ಹಾಟ್ ಇಟ್ ಈಸ್ ಎನ್ನಿಸುವ ಹೀರೋ. ಕಥೆಯ ಕೆಟಗರಿ ಯಾವುದು..? ಅಂದಹಾಗೆ ಇದು ಪಕ್ಕಾ ಯೂಥ್‌ಫುಲ್ ಫಿಲ್ಮ್.
ಚಿತ್ರದ ಕಥಾ ನಾಯಕನ ಬದುಕು, ದೃಷ್ಟಿಕೋನವೇ ಬೇರೆ. ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳದೆ, ತನ್ನಿಷ್ಟ ಬಂದAತೆ ಬದುಕುವ ಹುಡುಗ ಪಾರ್ಥ. ಆ ಪಾರ್ಥನ ಲೈಫಿನಲ್ಲಿ ಮೂರು ಹುಡುಗಿಯರು ಎಂಟ್ರಿ ಕೊಡುತ್ತಾರೆ. ರಾಧಿಕಾ ನಾರಾಯಣ್, ಅನನ್ಯ ಕಶ್ಯಪ್ ಜೊತೆಗೆ ದತ್ತಣ್ಣನೂ ಇದ್ದಾರೆ. ಲವ್ ಬ್ರೇಕಪ್ ಆದ ಮೇಲೆ ಜೀವನವೇ ಖತಂ ಎಂದುಕೊಳ್ಳುವ ಯುವ ಜನಾಂಗಕ್ಕೆ ಮುಂದಿನ ನಿಲ್ದಾಣದಲ್ಲೊಂದು ಸಂದೇಶವೂ ಇದೆ. ಇದು ವಿನಯ್ ಭಾರದ್ವಾಜ್ ನಿರ್ದೇಶನದ ಸಿನಿಮಾ. ಚಿತ್ರದ ಸೆಲಬ್ರಿಟಿ ಶೋಗೆ ವಂಡರ್‌ಫುಲ್ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಮೆಚ್ಚಿಕೊಳ್ಳಬೇಕಿರುವುದು ಪ್ರೇಕ್ಷಕ ಪ್ರಭು.