` ಸಿದ್ಧಗಂಗಾ ಮಠದ 10,000 ಮಕ್ಕಳಿಗೆ ಪುನೀತ್ ಟ್ರಸ್ಟ್ ನೇತ್ರ ಪರೀಕ್ಷೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth rajkuamr's service in siddaganga mutt
Puneeth Rajkumar Service in Siddaganga Mutt

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತೊಮ್ಮೆ ಹೃದಯ ಗೆದ್ದಿದ್ದಾರೆ. ಈ ಬಾರಿ ಸಿದ್ಧಗಂಗಾ ಮಠದಲ್ಲಿ ಸುಮಾರು 10 ಸಾವಿರ ಮಕ್ಕಳಿಗೆ ನೇತ್ರ ಪರೀಕ್ಷೆ ಮಾಡಿಸಿ, ಅಗತ್ಯವಿದ್ದವರಿಗೆ ಕನ್ನಡಕಗಳನ್ನೂ ವಿತರಿಸಿದ್ದಾರೆ ಪುನೀತ್ ರಾಜ್‌ಕುಮಾರ್.

ಡಾ.ರಾಜ್‌ಕುಮಾರ್ ಟ್ರಸ್ಟ್, ಬೆಂಗಳೂರು. ಡಾ.ರಾಜ್‌ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರ, ಬಿಡದಿ ಸಂಸ್ಥೆಗಳ ಮೂಲಕ ಸಿದ್ಧಗಂಗಾ ಮಠದಲ್ಲಿ ಈ ಕೆಲಸ ನೆರವೇರಿದರೆ, ಶಂಕರ್ ಕಣ್ಣಿನ ಆಸ್ಪತ್ರೆ ಈ ಕಾರ್ಯಕ್ಕೆ ಕೈ ಜೋಡಿಸಿತ್ತು.

ಸಿದ್ಧಗಂಗಾ ಮಠದ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಸಾಧುಕೋಕಿಲ, ದೊಡ್ಡಣ್ಣ ಕೂಡಾ ಕಾರ್ಯಕ್ರಮದಲ್ಲಿದ್ದರು. ನೇತ್ರದಾನದ ಬಗ್ಗೆ ರಾಜ್ಯದಲ್ಲಿ ಬಹುದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಿದ ಡಾ.ರಾಜ್ ಹಾದಿಯಲ್ಲಿಯೇ ಅವರ ಮಕ್ಕಳೂ ಸಾಗುತ್ತಿದ್ದಾರೆ.

Sri Bharaha Baahubali Pressmeet Gallery

Maya Bazaar Pressmeet Gallery