ಸದ್ಯಕ್ಕೆ ಸ್ಯಾಂಡಲ್‌ವುಡ್‌ನ ರೊಮ್ಯಾಂಟಿಕ್ ಸೆನ್ಸೇಷನ್ ಹಿಡ್ಕ ಹಿಡ್ಕ ಸಾಂಗ್. ಎಷ್ಟು ರೊಮ್ಯಾಂಟಿಕ್ ಅಂದ್ರೆ, ಚಿತ್ರದ ಲಿರಿಕಲ್ ಮತ್ತು ಮೇಕಿಂಗ್ ವಿಡಿಯೋವನ್ನೇ ಪಡ್ಡೆಗಳು ಕಣ್ಣು ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದಾರೆ. ಆದರೆ, ಈ ಭರ್ಜರಿ ರೊಮ್ಯಾಂಟಿಕ್ ಸಾಂಗ್‌ನ ವಿಶೇಷತೆ ಏನು ಗೊತ್ತೇ..?
ಇಡೀ ಹಾಡು ರೊಮ್ಯಾಂಟಿಕ್ ಆಗಿದ್ದರೂ, ಹಾಡಿನಲ್ಲಿ ಹೀರೋ ಹೀರೋಯಿನ್ ಒಂದ್ಸಲ ಕೂಡಾ ಕನಿಷ್ಠ ಅಪ್ಪಿಕೊಳ್ಳುವುದೂ ಇಲ್ಲವಂತೆ.. ಅರೆ.. ಅದು ಹೇಗೆ..?
ಹೌದು, ಆ ಹಾಡಿನ ವಿಶೇಷತೆಯೇ ಅದು. ಹಾಡು ಸಖತ್ ರೊಮ್ಯಾಂಟಿಕ್ ಆಗಿದೆ. ಆದರೆ ಕೇಳೋಕೆ ಮಾತ್ರ. ದೃಶ್ಯಗಳಲ್ಲಿ ಒಂದು ಅಪ್ಪುಗೆಯ ದೃಶ್ಯವೂ ಇಲ್ಲ ಎನ್ನುತ್ತಾರೆ ಆದಿತಿ ಪ್ರಭುದೇವ.
ಇಡೀ ಚಿತ್ರದಲ್ಲಿ ಕಾಮಿಡಿ ಇದೆ. ಅದು ಸೆಕ್ಸ್ ಕಾಮಿಡಿ ಅಲ್ಲ. ಸಿಚುಯೇಷನ್ ಕಾಮಿಡಿ ಎನ್ನುವ ಆದಿತಿ ನೀನಾಸಂ ಸತೀಶ್ ಕಷ್ಟ ನೆನಪಿಸಿಕೊಂಡು ಈಗಲೂ ನಗ್ತಾರೆ. ಅಷ್ಟರಮಟ್ಟಿಗೆ ಕ್ಯಾರೆಕ್ಟರ್ ಕಟ್ಟಿಕೊಟ್ಟಿದ್ದಾರಂತೆ ನಿರ್ದೇಶಕ ಚಂದ್ರಮೋಹನ್. ಉದಯ್ ಕುಮಾರ್ ನಿರ್ಮಾಣದ ಬ್ರಹ್ಮಚಾರಿ ಚಿತ್ರ ಇದೇ ವಾರ ರಿಲೀಸ್. ಹಿಡ್ಕ.. ಹಿಡ್ಕ.. ಹಿಡ್ಕ..