ಚೂರಿಕಟ್ಟೆ ಎನ್ನುವ ಸಿನಿಮಾ ನೆನಪಿದೆಯಾ..? ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಸದ್ದು ಮಾಡದೇ ಇದ್ದರೂ, ವಿಮರ್ಶಕರ ಕಣ್ಣು ಅರಳಿಸಿತ್ತು. ಅಲ್ಲಿ ಗಮನ ಸೆಳೆದಿದ್ದ ಪ್ರವೀಣ್ ತೇಜ್, ಈಗ ಸಾಫ್ಟ್ವೇರ್ ಎಂಜಿನಿಯರ್ ಆಗಿ ಮುಂದಿನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ 26ನೇ ವಯಸ್ಸಿನ ಯುವಕನಿಂದ 36ನೇ ವಯಸ್ಸಿನ ಮಧ್ಯವಯಸ್ಕನವರೆಗೆ 4 ಗೆಟಪ್ಪುಗಳಲ್ಲಿ ನಟಿಸಿರುವ ಪ್ರವೀಣ್ ತೇಜ್, ಈ ಪಾತ್ರಕ್ಕಾಗಿ 13 ಕೆಜಿ ತೂಕ ಹೆಚ್ಚಿಸಿಕೊಂಡು ಇಳಿಸಿಕೊಂಡಿದ್ದಾರAತೆ.
`ನನ್ನದು ಸಾಫ್ಟ್ವೇರ್ ಹುಡುಗನ ಪಾತ್ರ. ಫೋಟೋಗ್ರಫಿಯಲ್ಲೂ ಆಸಕ್ತಿ ಇರುವ ಯುವಕನ ಜೀವನದಲ್ಲಿನಡೆಯುವ ಘಟನೆಯೇ ಮುಂದಿನ ನಿಲ್ದಾಣ ಚಿತ್ರದ ಕಥೆ' ಎನ್ನುವ ಪ್ರವೀಣ್ ತೇಜ್, ಚಿತ್ರ ಚೆಂದ ಕಾಣುತ್ತಿದೆ. ಎಲ್ಲ ಕ್ರೆಡಿಟ್ಟೂ ನಿರ್ದೇಶಕರದ್ದು ಎನ್ನುತ್ತಾರೆ.
ನಿರ್ದೇಶಕ ವಿನಯ್ ಭಾರದ್ವಾಜ್ ಅವರಿಗೂ ಚಿತ್ರದ ಬಗ್ಗೆ ಖುಷಿ ಮತ್ತು ನಿರೀಕ್ಷೆ ಹೆಚ್ಚಾಗಿಯೇ ಇದೆ. ರಾಧಿಕಾ ನಾರಾಯಣ್, ಅನನ್ಯ ಕಶ್ಯಪ್ ಹಾಗೂ ದತ್ತಣ್ಣ ನಟಿಸಿರುವ ಚಿತ್ರ, ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಲಿದೆ ಎನ್ನುತ್ತಾರೆ ವಿನಯ್.