` ಅಂತೂ.. ಶ್೨ಗೆ ವಿ.ಮನೋಹರ್ ಎಂಟ್ರಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
v manohar finally takes up ssh 2
Sssh 2

ಶ್-೨ ವಿವಾದ ನೆನಪಿದೆ ತಾನೇ. ಇತ್ತೀಚೆಗೆ ಶ್೨ ಚಿತ್ರದ ಪೋಸ್ಟರ್ ರಿಲೀಸ್ ಆಗಿತ್ತು. ಜಾಹೀರಾತಿನಲ್ಲಿ ಚಿತ್ರದ ನಿರ್ದೇಶಕ ಎಂದು ವಿ.ಮನೋಹರ್ ಅವರನ್ನು ಘೋಷಿಸಲಾಗಿತ್ತು. ಆದರೆ, ಇದಕ್ಕೆ ನಿರ್ಮಾಪಕ ಕನಕಪುರ ವೆಂಕಟೇಶ್ ಮನೋಹರ್ ಅವರ ಅನುಮತಿಯನ್ನೇ ಪಡೆದಿರಲಿಲ್ಲ.

ಇದ್ಯಾವುದೋ ನನಗೆ ಗೊತ್ತಿಲ್ಲ. ನನಗೂ ಶ್೨ಗೂ ಸಂಬAಧವಿಲ್ಲ. ನಿರ್ಮಾಪಕರನ್ನೂ ನಾನು ನೋಡಿಲ್ಲ ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ಕೊಟ್ಟಿದ್ದರು ವಿ.ಮನೋಹರ್. ಅಲ್ಲದೆ ಅದು ಉಪೇಂದ್ರ ಅವರ ಮಾಸ್ಟರ್ ಪೀಸ್. ಅದನ್ನು ನಾನು ನಿರ್ದೇಶನ ಮಾಡಲ್ಲ ಎಂದೂ ಹೇಳಿದ್ದರು.

ಈಗ ಅದೇ ಚಿತ್ರಕ್ಕೆ ಸಂಗೀತ ಕೊಡಲು ಒಪ್ಪಿದ್ದಾರೆ. ಸಂಗೀತ ನಿರ್ದೇಶನಕ್ಕೆ ಯೆಸ್ ಎಂದಿರುವ ವಿ.ಮನೋಹರ್, ಡಿಸೆಂಬರ್‌ನಲ್ಲಿ ಕೆಲಸ ಶುರು ಮಾಡಲಿದ್ದಾರಂತೆ. ಅಂದಹಾಗೆ ಚಿತ್ರಕ್ಕೆ ನಿರ್ದೇಶಕರು ಸೇರಿದಂತೆ ಯಾವುದೇ ಕಲಾವಿದರು, ತಂತ್ರಜ್ಞರ ಆಯ್ಕೆ ಇನ್ನೂ ಆಗಿಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery