ಮುಂದಿನ ನಿಲ್ದಾಣ ಇದೇ ವಾರ ತೆರೆಗೆ ಬರುತ್ತಿರುವ ಸಿನಿಮಾ. ರಾಧಿಕಾ ಚೇತನ್, ತಮ್ಮ ಹೆಸರನ್ನು ರಾಧಿಕಾ ನಾರಾಯಣ್ ಎಂದು ಬದಲಿಸಿಕೊಂಡ ಮೇಲೆ ಬರುತ್ತಿರುವ ಮೊದಲ ಚಿತ್ರವೂ ಹೌದು. ಚಿತ್ರದಲ್ಲಿ ರಾಧಿಕಾ ನಾರಾಯಣ್ ಅವರ ಹೆಸರು ಮೀರಾ ಶರ್ಮ.
ಗ್ಲಾಮರಸ್ ಲುಕ್ಕಿನ ರಾಧಿಕಾ ಚಿತ್ರದಲ್ಲಿ ಇದುವರೆಗೂ ಕಾಣದೇ ಇರುವ ಗ್ಲಾಮರ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದೇ ವಿಶೇಷ.
ಇಡೀ ಚಿತ್ರದಲ್ಲಿ ವಿಶೇಷತೆಗಳ ಮೆರವಣಿಗೆಯೇ ಇದೆ. ನಿರ್ದೇಶಕ ವಿನಯ್ ಭಾರದ್ವಾಜ್, ಬ್ಯಾಂಕಿAಗ್ ಕ್ಷೇತ್ರದಲ್ಲಿದ್ದವರು. ಈಗ ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಪಾರ್ಥ, ಮೀರಾ ಮತ್ತು ಅಹನಾ.. ಈ ಮೂರು ಪಾತ್ರಗಳು ಹುಡುಕಿಕೊಳ್ಳುವ ಮುಂದಿನ ನಿಲ್ದಾಣವೇ ಮುಂದಿನ ನಿಲ್ದಾಣದ ಕಥೆ.
ನಿರ್ದೇಶಕ ವಿನಯ್ ಭಾರದ್ವಾಜ್ ಅವರಿಗೆ ರಾಧಿಕಾ ನಾರಾಯಣ್, ಪ್ರವೀಣ್ ತೇಜ್, ಅನನ್ಯಾ ಕಶ್ಯಪ್ ಜೊತೆಯಾಗಿದ್ದಾರೆ.