ಪುನೀತ್ ರಾಜ್‌ಕುಮಾರ್, ಅತ್ತ ಕಡೆ ಕಮರ್ಷಿಯಲ್.. ಇತ್ತ ಕಡೆ ಪ್ರಯೋಗಾತ್ಮಕ ಚಿತ್ರಗಳ ಪ್ರಯೋಗಕ್ಕಿಳಿದಿದ್ದಾರೆ. ತಮ್ಮದೇ ಬ್ಯಾನರ್‌ನಲ್ಲಿ ತಾವೇ ನಿರ್ಮಾಪಕರಾಗಿ ಕವಲುದಾರಿಯಂತಹ ಚಿತ್ರ ನೀಡಿ ಗೆದ್ದ ಪುನೀತ್, ಈಗ ಮಾಯಾಬಜಾರ್ ಚಿತ್ರವನ್ನು ರಿಲೀಸ್ ಮಾಡಲು ರೆಡಿಯಾಗುತ್ತಿದ್ದಾರೆ. ಇನ್ನೂ ಎರಡು ಚಿತ್ರಗಳು ಪ್ರೊಡಕ್ಷನ್ ಹಂತದಲ್ಲಿವೆ. ಹೀಗಿರುವಾಗಲೇ ತಾವೇ ಹೀರೋ ಆಗಿರುವ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಪಿಆರ್‌ಕೆ ಬ್ಯಾನರ್‌ನಲ್ಲಿ ರಾಮಾ ರಾಮಾ ರೇ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್, ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ಅವರೇ ಹೀರೋ. ಅವರೇ ಪ್ರೊಡ್ಯೂಸರ್. ೨೦೨೦ರ ಆರಂಭದಲ್ಲಿ ಚಿತ್ರದ ಕೆಲಸ ಶುರುವಾಗಲಿದ್ದು, ಸತ್ಯಪ್ರಕಾಶ್ ಪ್ರಿಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.