ಮುಂದಿನ ನಿಲ್ದಾಣ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದೆ. ತುಂಬಾ ದಿನಗಳೇನೂ ಇಲ್ಲ. ಇಡೀ ಟ್ರೇಲರಿನಲ್ಲಿ ಎದ್ದು ಕಾಣ್ತಿರೋದು ರಾಧಿಕಾ ನಾರಾಯಣ್. ರಂಗಿತರAಗದ ಚೆಲುವೆ ಇವರೇನಾ ಎನ್ನುವಷ್ಟರ ಮಟ್ಟಿಗೆ ಬೆರಗು ಹುಟ್ಟಿಸಿದ್ದಾರೆ ರಾಧಿಕಾ. ಪಕ್ಕಾ ಸ್ಟೆöÊಲಿಷ್ ಲುಕ್. ಮಾಡರ್ನ್ ಮೀರಾ.
ನಿರ್ದೇಶಕ ವಿನಯ್ ಭಾರದ್ವಾಜ್ ಇದಕ್ಕೂ ಮೊದಲು ಒಂದು ಆಲ್ಬಂ ಮಾಡಿದ್ದರು. ಅದರಲ್ಲಿ ನನಗೆ ಡ್ರಗ್ ಅಡಿಕ್ಟ್ ರೋಲ್ ಕೊಟ್ಟಿದ್ದರು. ಅದು ಒಂದು ರೀತಿಯಲ್ಲಿ ನನ್ನ ಅಡಿಷನ್ ಆಗಿತ್ತು ಎಂದಿದ್ದಾರೆ ರಾಧಿಕಾ.
ಚಿತ್ರಕ್ಕಾಗಿ ಯೋಗ ಮಾಡಿ, ದಿನಕ್ಕೆ ೭೦-೮೦ ಸೂರ್ಯ ನಮಸ್ಕಾರ ಮಾಡಿದ್ದ ರಾಧಿಕಾ, ಪಾತ್ರಕ್ಕಾಗಿ ಏಳೆಂಟು ಕೆಜಿ ತೂಕ ಇಳಿಸಿಕೊಂಡರAತೆ.