ಬ್ರಹ್ಮಚಾರಿ ಚಿತ್ರ ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಇತ್ತೀಚೆಗೆ ಬರುತ್ತಿರುವ ಕಾಮಿಡಿ ಜಾನರ್ ಚಿತ್ರಗಳಲ್ಲೇ ಅತಿ ಹೆಚ್ಚು ಕುತೂಹಲ ಹುಟ್ಟಿಸಿರುವ ಸಿನಿಮಾ, ಟ್ರೇಲರ್, ಹಾಡಿನಿಂದಲೇ ಭರ್ಜರಿ ಸದ್ದು ಮಾಡಿದೆ. ಟ್ರೇಲರ್ ವೀಕ್ಷಿಸಿದವರ ಸಂಖ್ಯೆ ೧೧ ಲಕ್ಷ ದಾಟಿದ್ದರೆ, ಹಿಡ್ಕ ಹಿಡ್ಕ ಸಾಂಗ್ ನೋಡಿದವರ ಸಂಖೆ ೧೦ ಲಕ್ಷ ದಾಟಿದೆ.
ಒಂದೊಳ್ಳೆ ಲವ್ ಸ್ಟೋರಿಯಿಂದ ಸಿನಿಮಾ ಶುರುವಾಗುತ್ತೆ. ಮದುವೆಯಾಗುತ್ತೆ. ಗೃಹಸ್ಥನಾದರೂ ಬ್ರಹ್ಮಚಾರಿಯಾಗಿಯೇ ಇರುತ್ತಾನೆ ನಾಯಕ. ಏಕೆ ಅನ್ನೋದನ್ನೇ ನಿರ್ದೇಶಕರು ಮಜವಾಗಿ ಹೇಳಿದ್ದಾರೆ ಎನ್ನುವ ನೀನಾಸಂ ಸತೀಶ್, ಸದ್ಯಕ್ಕೆ ಲಂಡನ್‌ನಲ್ಲಿದ್ದಾರೆ. ರಿಲೀಸ್ ಹೊತ್ತಿಗೆ ಭಾರತಕ್ಕೆ ವಾಪಸ್ ಬರುವ ಸಾಧ್ಯತೆ ಇದೆ.
ಸತೀಶ್ ಜೊತೆ ಸೊಂಟ ಬಳುಕಿಸಿರುವುದು ಆದಿತಿ ಪ್ರಭುದೇವ. ನಿರ್ದೇಶನ ಚಂದ್ರಮೋಹನ್ ಅವರದ್ದು.