ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೇ ವರ್ಷ ಮತ್ತೊಂದು ದಾಖಲೆ ಬರೆಯಲಿದ್ದಾರೆ. ಡಿಸೆಂಬರ್ ತಿಂಗಳಲ್ಲೇ ಒಡೆಯ ಬರುತ್ತಿದ್ದಾನೆ. ಡಿಸೆಂಬರ್ ೧೨ನೇ ತಾರೀಕಿನಂದು ಒಡೆಯ ರಿಲೀಸ್ ಆಗಲಿದೆ. ಅಲ್ಲಿಗೆ ಈ ವರ್ಷ ದರ್ಶನ್ ಅಭಿನಯದ ೪ ಚಿತ್ರಗಳು ರಿಲೀಸ್ ಆದಂತಾಗಲಿವೆ.
ಈಗಾಗಲೇ ಕುರುಕ್ಷೇತ್ರ ಮತ್ತು ಯಜಮಾನ ಚಿತ್ರಗಳು ೧೦೦ ದಿನ ಪೂರೈಸಿವೆ. ಅಮರ್ ಚಿತ್ರದಲ್ಲಿ ದರ್ಶನ್ ಅತಿಥಿ ನಟನಾಗಿ ನಟಿಸಿದ್ದರು. ಈಗ ಒಡೆಯ ರಿಲೀಸ್ ಆದರೆ ೨೦೧೯ರಲ್ಲಿ ದರ್ಶನ್ ಅಭಿನಯದ ಒಟ್ಟು ೪ ಸಿನಿಮಾ ರಿಲೀಸ್ ಆದಂತಾಗಲಿವೆ.
ಸಂದೇಶ್ ಕಂಬೈನ್ಸ್ನಲ್ಲಿ ನಿರ್ಮಾಣವಾಗಿರುವ ಚಿತ್ರದಲ್ಲಿ ದರ್ಶನ್ ಎದುರು ಸನಾ ತಿಮ್ಮಯ್ಯ ನಾಯಕಿ. ಎಂ.ಡಿ.ಶ್ರೀಧರ್ ನಿರ್ದೇಶನದ ಸಿನಿಮಾ, ತಮಿಳಿನ ವೀರಂ ಚಿತ್ರದ ರೀಮೇಕ್. ದರ್ಶನ್ ಅವರೊಂದಿಗೆ ದೇವರಾಜ್, ಶರತ್ ಲೋಹಿತಾಶ್ವ, ರವಿಶಂಕರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.