Print 
aniruddh,

User Rating: 5 / 5

Star activeStar activeStar activeStar activeStar active
 
anirudh makes yet another record
Anirudh Jatkar

ಅನಿರುದ್ಧ, ಈಗ ಕಿರುತೆರೆಯ ಸೂಪರ್ ಸ್ಟಾರ್. ಅವರ ಜೊತೆ ಜೊತೆಯಲಿ ಧಾರಾವಾಹಿ, ಕನ್ನಡ ಕಿರುತೆರೆಯಲ್ಲಿ ಕಲ್ಪನೆ ಮಾಡಿಕೊಳ್ಳಲೂ ಅಸಾಧ್ಯ ಎನ್ನುವಂತೆ ಟಿಆರ್‌ಪಿ ಗಳಿಸಿದೆ. ಗಳಿಸುತ್ತಿದೆ. ಪ್ರತಿವಾರವೂ ಹೊಸ ದಾಖಲೆ ಬರೆಯುತ್ತಿದೆ. ಅನಿರುದ್ಧ್ ಅವರಿಗೆ ಚಿತ್ರರಂಗದಲ್ಲಿ ಸಿಕ್ಕಿದ್ದಕ್ಕಿಂತ ೧೦೦ ಪಟ್ಟು ಹೆಚ್ಚು ಅಭಿಮಾನಿಗಳು ಕಿರುತೆರೆಯಿಂದ ಸಿಕ್ಕಿದ್ದಾರೆ. ಈ ಸಂಭ್ರಮದ ನಡುವೆಯೇ ಅನಿರುದ್ಧ್ ಹೊಸ ದಾಖಲೆ ಬರೆದಿದ್ದಾರೆ. ಆದರೆ, ಇದು ಸೀರಿಯಲ್ ರೆಕಾರ್ಡ್ ಅಲ್ಲ.

ಅನಿರುದ್ಧ್ ಅವರು ಇತ್ತೀಚೆಗೆ ಕಿರುಚಿತ್ರಗಳ ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು. ಆ ಕಿರುಚಿತ್ರ ಈಗ ದಾಖಲೆ ಪ್ರಶಸ್ತಿ ಗಳಿಸಿದೆ. ೫ ಪ್ರಶಸ್ತಿ ಬಾಚಿಕೊಂಡಿರುವ ಅವರ ಕಿರುಚಿತ್ರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸನಲ್ಲಿ ಟಾಪ್ ೧೦೦ ಸ್ಥಾನ ದೊರಕಿಸಿಕೊಟ್ಟಿದೆ.

ಕಲಾಂ ಬುಕ್ ಆಫ್ ರೆಕಾರ್ಡ್ಸನಲ್ಲೂ ೫ ಪ್ರಶಸ್ತಿ ಪಡೆದಿರುವ ಅನಿರುದ್ಧ್, ಕಲಾಮ್ಸ್ ಗೋಲ್ಡನ್ ಅವಾರ್ಡ್ ಕೂಡಾ ಪಡೆದಿದ್ದಾರೆ. ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ೪ ಪ್ರಶಸ್ತಿ ಪಡೆದಿದ್ದು, ಗ್ರಾö್ಯಂಡ್ ಮಾಸ್ಟರ್ ಪ್ರಶಸ್ತಿ ಪಡೆದಿದ್ದಾರೆ. ಒಟ್ಟಿನಲ್ಲಿ ಅನಿರುದ್ಧ್ ಅವರಿಗೀಗ ಸಂಭ್ರಮದ ವರ್ಷ.